ಬಸವನಗುಡಿ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ: ಜಾತ್ರೆ ಸ್ಥಳದಲ್ಲೇ ಕರೊನಾ ಟೆಸ್ಟಿಂಗ್​, ವ್ಯಾಕ್ಸಿನೇಷನ್

bulltempale kadekayi parishe
Published on

ಬೆಂಗಳೂರು: ಕರೊನಾ ಮತ್ತು ರೂಪಾಂತರಿ ಒಮಿಕ್ರಾನ್​ ಸೋಂಕಿನ ಭೀತಿ ನಡುವೆಯೂ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಸೋಮವಾರ (ನ.29) ಚಾಲನೆ ಸಿಗಲಿದೆ. 3 ದಿನ (ಡಿ.1ರವರೆಗೆ) ನಡೆಯುವ ಪರಿಷೆಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಭಾನುವಾರವೇ ಜಾತ್ರೆಯ ವಾತಾವರಣ ನಿರ್ಮಾಣಗೊಂಡಿದೆ. ಜಾತ್ರೆ ನಡೆಯುವ ಸ್ಥಳದಲ್ಲೇ ಕರೊನಾ ಟೆಸ್ಟ್ ಮಾಡಲು ಮತ್ತು ಕರೊನಾ ವ್ಯಾಕ್ಸಿನ್​ ಹಾಕುವ ಕಾರ್ಯವೂ ನಡೆಯಲಿದೆ.

ದೊಡ್ಡ ಗಣಪತಿ ದೇವ ಸ್ಥಾನದಿಂದ ರಾಮಕೃಷ್ಣ ಆಶ್ರಮ ವೃತ್ತದ ವರೆಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಪರಿಷೆಯಲ್ಲಿ ವಿವಿಧ ತಳಿಯ ಕಡಲೆಕಾಯಿಯ ವ್ಯಾಪಾರ ವಹಿವಾಟು ನಡೆಯಲಿದೆ. ಪರಿಷೆಗೆ ಬರುವ ಪ್ರತಿಯೊಬ್ಬರೂ ಮಾಸ್ಕ್​ ಧರಿಸುವುದು, ಸ್ಯಾನಿಟೈಸರ್​ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆಯನ್ನ ಮರೆಯುವಂತಿಲ್ಲ. ಪರಿಷೆಯ ಗುಂಗಿನಲ್ಲಿ ಮಾಸ್ಕ್​ ಮರೆತು ಬಂದವರಿಗೆ ದಂಡ ವಿಧಿಸಿ ಹೊರ ಕಳಿಸಲಾಗುತ್ತದೆ ಎಚ್ಚರ. ಇನ್ನು ಪರಿಷೆಯಲ್ಲಿ ಪ್ಲಾಸ್ಟಿಕ್ ಕೈಚೀಲ ಬಳಕೆ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಚೀಲದಲ್ಲಿ ಕಡಲೆಕಾಯಿ ನೀಡುವುದು ಕಂಡು ಬಂದರೆ ದಂಡ ವಿಧಿಸಲಾಗುವುದು ಎಂದು ವರ್ತಕರಿಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net