

ಚಿಕ್ಕೋಡಿ: ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ದಿನದಿಂದ ಹೆಚ್ಚುತ್ತಲೇ ಇದೆ. ಇದೀಗ ಮತ್ತೊಂದು ಕೇಸ್ ದಾಖಲಾಗಿದೆ.
ತೋಟದಲ್ಲಿ ಕೆಲಸಕ್ಕಿದ್ದ ಮಹಿಳೆ ಮೇಲೆ ಮಾಲೀಕನಿಂದಲೇ ಅತ್ಯಾಚಾರ ನಡೆದಿದೆ ಎಂದು ಗೋಕಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸೆ. 17ರ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಿದ್ದಪ್ಪ ಕೋಟೂರ್ ಎಂಬುವರ ತೋಟದಲ್ಲಿ ಸಂತ್ರಸ್ತೆ ಕುಟುಂಬ ಕೂಲಿ ಕೆಲಸ ಮಾಡಿಕೊಂಡು ಅಲ್ಲೇ ಶೆಡ್ನಲ್ಲಿ ವಾಸವಿದೆ. ಸಂತ್ರಸ್ತೆಯ ಪತಿ ಮನೆಯಿಂದ ಹೊರ ಹೋದಾಗ ಅಲ್ಲಿಗೆ ಬಂದ ಜಮೀನು ಮಾಲೀಕನು ತನ್ನ ಸಹಚರನನ್ನು ಶೆಡ್‌ನ ಕಾವಲಿಗಿರಿಸಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದನ್ನು ತಡೆಯಲು ಬಂದ ಮಹಿಳೆಯ 5 ವರ್ಷದ ಮಗನನ್ನೂ ತಳ್ಳಿದ ಜಮೀನು ಮಾಲೀಕ ಕೃತ್ಯ ವೆಸಗಿದ್ದಾನೆ. ಈ ವಿಚಾರವನ್ನ ಯಾರಿಗಾದರೂ ಹೇಳಿದ್ರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಶೆಡ್‌ನ ಕಾವಲಿಗಿದ್ದ ವ್ಯಕ್ತಿಯೂ ಜೀವ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆಯು ಗೋಕಾಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಜಮೀನು ಮಾಲೀಕ ಮತ್ತು ಆತನ ಸಹಚರನ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.