ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಕರಡಿ ದಾಳಿ

Published on


ಅರಸೀಕೆರೆ: ತಾಲೂಕಿನ ಸಿದ್ದರಹಳ್ಳಿ ತಾಂಡ್ಯ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಕರಡಿ ದಾಳಿ ನಡೆಸಿದ ಪರಿಣಾಮ ಜಮೀನಿಗೆ ತೆರಳುತ್ತಿದ್ದ ರೈತ ಗಂಭೀರವಾಗಿ ಗಾಯಗೊಂಡಿದ್ದಾನೆ.


ಮೂರ್ತಿ ನಾಯ್ಕ (68) ಗಾಯಗೊಂಡಿರುವ ಕೃಷಿಕ.
ಎಂದಿನಂತೆ ತೋಟಕ್ಕೆ ತೆರಳುತ್ತಿದ್ದ ವೇಳೆ ದಿಢೀರ್ ಮೇಲೆರಗಿದ ಕರಡಿ ಮುಖ, ತಲೆ, ಕೈ ಕಾಲು, ಬೆನ್ನು ಮೊದಲಾದ ಕಡೆ ಕಚ್ಚಿದೆ. ತಕ್ಷಣವೇ ದೌಡಾಯಿಸಿದ ಸ್ಥಳೀಯರು ಮೂರ್ತಿ ನಾಯ್ಕ ಅವರನ್ನು ರಕ್ಷಿಸಿದ್ದಾರೆ. ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಜಿಲ್ಲಾ ಹಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.


ಕರಡಿ ದಾಳಿಯಿಂದ ಕೆಲ ದಿನಗಳ ಹಿಂದಷ್ಟೇ ಜನ್ನಾವರ ಗ್ರಾಮದ ರೈತನೊಬ್ಬ ಜೀವ ಕಳೆದುಕೊಂಡಿದ್ದ ಘಟನೆ ಮಾಸುವ ಮೊದಲೇ ಮತ್ತೊಂದು ದಾಳಿ ನಡೆದಿರುವುದು ಹಿರೇಕಲ್ ಗುಡ್ಡದ ಆಸುಪಾಸಿನ ಜನರನ್ನು ಆತಂಕಕ್ಕೆ ದೂಡಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net