ಜೇಮ್ಸ್ ಚಿತ್ರಕ್ಕೆ ಮುಗಿಬಿದ್ದ ಅಭಿಮಾನಿಗಳು: ಲಾಠಿ ಬೀಸಿದ ಪೊಲೀಸರು

New Project(25)
Published on

ಬಾಗಲಕೋಟೆ: ರಾಜ್ಯಾದ್ಯಾಂತ ಅಪ್ಪು ಅಭಿಮಾನಿಗಳು ನೋವಿನಲ್ಲೇ 'ಜೇಮ್ಸ್​' ಜಾತ್ರೆಯಲ್ಲಿ ಮುಳುಗಿದ್ದಾರೆ. ಅಪ್ಪು ಇಲ್ಲದ ಮೊದಲ ಬರ್ತ್​ ಡೇ ದಿನದಂದೇ ಬಿಡುಗಡೆಯಾದ ಅವರು ನಾಯಕರಾಗಿ ನಟಿಸಿರುವ ಕೊನೇ ಚಿತ್ರ ಜೇಮ್ಸ್​ ಕಣ್ತುಂಬಿಕೊಳ್ಳಲು ಚಿತ್ರಮಂದಿರಗಳ ಬಳಿ ಜನಸಾಗರವೇ ಸಾಲುಗಟ್ಟಿ ನಿಂತಿದೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಅತ್ತ ಬಾಗಲಕೋಟೆಯಲ್ಲಿ ಜೇಮ್ಸ್ ಸಿನಿಮಾ ಟಿಕೆಟ್​ಗಾಗಿ ಮುಗಿಬಿದ್ದ ಅಭಿಮಾನಿಗಳತ್ತ ಪೊಲೀಸರು ಲಾಠಿ ಬೀಸಿದ ಘಟನೆಯೂ ನಡೆದಿದೆ.

ಬಾಗಲಕೋಟೆಯ ಶಕ್ತಿ ಚಿತ್ರಮಂದಿರದಲ್ಲಿ ಸೆಕೆಂಡ್ ಶೋ ಆರಂಭದ ವೇಳೆ ಈ ಘಟನೆ ಸಂಭವಿಸಿದೆ. ಫಸ್ಟ್ ಶೋಗೆ ಟಿಕೆಟ್ ಸಿಗದವರು ಹಾಗೂ ಸೆಕೆಂಡ್ ಶೋಗೆ ಬಂದವರು ಎಲ್ಲರೂ ಒಮ್ಮೆಲೆ ಜಮಾಯಿಸಿದ್ದರು. ಜನದಟ್ಟಣೆ ಹೆಚ್ಚಾಗಿತ್ತು. ಅಷ್ಟೇ ಅಲ್ಲ ಟಾಕೀಸ್​ನ ಒಳ ಹೋಗಲು ಅಭಿಮಾನಿಗಳು ಮುಗಿಬಿದ್ದರು. ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net