ಕೊರಟಗೆರೆ ಪಟ್ಟಣದಲ್ಲಿ ಡಾಂಬರು ಡ್ರಮ್ ಸಿಡಿದು ಐವರಿಗೆ ಅಂಟಿಕೊಂಡ ಟಾರ್​

New Project(15)
Published on

ತುಮಕೂರು: ಡಾಂಬರು ಡ್ರಮ್ ಸಿಡಿದು ಐವರಿಗೆ ಟಾರ್​ ಅಂಟಿಕೊಂಡ ಘಟನೆ ಕೊರಟಗೆರೆ ಪಟ್ಟಣದ ಕರ್ನಾಟಕ ಬ್ಯಾಂಕ್ ಮುಂಭಾಗ ಭಾನುವಾರ ಸಂಭವಿಸಿದೆ.

ಟ್ರಾಕ್ಟರ್​ನಲ್ಲಿದ್ದ ಡ್ರಮ್​ನಿಂದ ಟಾರ್ ಸುಡೋ ವಾಹನಕ್ಕೆ ಡಾಂಬರನ್ನು ಡಂಪ್ ಮಾಡಿಕೊಳ್ಳುತ್ತಿದ್ದ ವೇಳೆ ಸಿಡಿದಿದೆ. ಅದೇ ವೇಳೆ ಆಟೋದಲ್ಲಿ ಗೊರವನಹಳ್ಳಿ ಮೂಲದ ಬರುತ್ತಿದ್ದ ಐವರು ಪ್ರಯಾಣಿಕರ ದೇಹಕ್ಕೆಲ್ಲ ಡಾಂಬರು ಸಿಡಿದ್ದಿದ್ದು, ದೇಹದ ಬಹುತೇಕ ಭಾಗ ಟಾರ್​ ಅಂಟಿಕೊಂಡಿದೆ.

ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕೊರಟಗೆರೆ ತಹಸೀಲ್ದಾರ್ ನಹೀದಾ ಜಂಜಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net