ವೈ.ಸಂಪಂಗಿ ಅವರ ಹುಟ್ಟುಹಬ್ಬಕ್ಕೆ ಬಂದಿದ್ದವ ಮಾಜಿ ಶಾಸಕರ ತೋಟದ ಬಳಿ ಶವವಾಗಿ ಪತ್ತೆ!

New Project(13)
Published on

ಕೋಲಾರ: ಮಾಜಿ ಶಾಸಕ ವೈ.ಸಂಪಂಗಿ ತೋಟದ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ ಪ್ರಕರಣ ಸಂಬಂಧ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದೆ.

ಜೂ.2ರಂದು ಪತ್ತೆಯಾದ ಶವ, ಮದ್ಯನಾಯಕನಹಳ್ಳಿ ಗ್ರಾಮದ ತಾಯಲೂರಪ್ಪ(60) ಅವರದ್ದು. ಇವರು ಜೂ.1ರಂದು ಮಾಜಿ ಶಾಸಕ ಸಂಪಂಗಿ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಅದೇ ಕಾರ್ಯಕ್ರಮದ ಸ್ಥಳದಲ್ಲಿ ಶವವಾಗಿ ಪತ್ತೆಯಾಗಿದ್ದ.

ಕೆಜಿಎಫ್ ತಾಲೂಕು ನಾಗಶೆಟ್ಟಿಹಳ್ಳಿ ಗ್ರಾಮದ ಬಳಿ ಸಂಪಂಗಿ ಅವರ ತೋಟ ಇದೆ. ಇಲ್ಲಿಯೇ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೇತಮಂಗಲ ಠಾಣೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net