ಆನೇಕಲ್​ನಲ್ಲಿ ವೇಶ್ಯಾವಾಟಿಕೆ ದೋಖಾ: ರೇಟ್​ ಫಿಕ್ಸ್​ ಮಾಡಿ ಸ್ವರ್ಗ ತೋರಿಸ್ತೀವಿ ಅಂತಾರೆ... ಆಮೇಲೆ ಆಗೋದೇ ಬೇರೆ

anekal
Published on

ಆನೇಕಲ್​: ಆನೇಕಲ್​ನ ಪ್ರತಿಷ್ಠಿತ ಬಡಾವಣೆಯಲ್ಲಿ ಆನ್​ಲೈನ್​ ವೇಶ್ಯಾವಾಟಿಕೆ ದೋಖಾ ಬಯಲಾಗಿದೆ. ಸೋಷಿಯಲ್​ ಮೀಡಿಯಾದಲ್ಲಿ ಚಂದದ ಫೋಟೋ ಹಾಕಿ ನೈಟ್​ಗೆ ಇಷ್ಟು, ಗಂಟೆಗೆ ಇಷ್ಟು ಅಂತ ರೇಟ್​ ಫಿಕ್ಸ್​ ಮಾಡಿ ಹಣ ವಸೂಲಿ ಮಾಡುತ್ತಿದ್ದರು.

ಪ್ರತಿಷ್ಠಿತ ಕಾಲೇಜೊಂದರ ಕೆಲ ವಿದ್ಯಾರ್ಥಿಗಳು ಈ ಜಾಲದಲ್ಲಿ ಆಕ್ಟಿವ್ ಆಗಿದ್ದರು ಎಂಬ ಆಘಾತಕಾರಿ ವಿಷಯವೂ ಬಯಲಾಗಿದೆ. 'ದಿಗ್ವಿಜಯ ನ್ಯೂಸ್​'ಗೆ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ವರದಿ ಪ್ರಸಾರ ಆಗುತ್ತಿದ್ದಂತೆ ಭವ್ಯಶ್ರೀ ಹೆಸರಿನಲ್ಲಿದ್ದ ಫೇಸ್​ಬುಕ್ ಅಕೌಂಟ್ ಡಿಲೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯುವಕರನ್ನು ಖೆಡ್ಡಕ್ಕೆ ಕೆಡವುತ್ತಿದ್ದ ಅಕೌಂಟ್ ಇದು.

ಆನೇಕಲ್ ಪಟ್ಟಣ ಹಾಗೂ ಚಂದಾಪುರ ರಸ್ತೆಯ ಖಾಸಗಿ ಬಡಾವಣೆಯಲ್ಲಿ ಮಾಂಸದಂಧೆ ನಡೆಸುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯವಹಾರ ಕುದುರಿಸುತ್ತಿದ್ದ ಖತರ್ನಾಕ್​ ಗ್ಯಾಂಗ್​, ಚಂದ ಚಂದದ ಹುಡುಗಿಯರ ಫೋಟೋ ಕಳಿಸಿ ಯಾರು ಬೇಕು ಆಯ್ಕೆ ಮಾಡಿಕೊಳ್ಳಿ ಎಂದು ಯುವಕರಿಗೆ ಗಾಳ ಹಾಕುತ್ತಿದ್ದರು. ಹುಡುಗಿಯರ ಫೋಟೋ ಕಳಿಸೋಕು ಮುನ್ನ ಅವರಿಂದ ಇಂತಿಷ್ಟು ಹಣ ಎಂದು ಆನ್​ಲೈನ್​ ಮೂಲಕ ತಮ್ಮ ಅಕೌಂಟ್​ಗೆ ಹಾಕಿಸಿಕೊಳ್ಳುತ್ತಿದ್ದರು. ಹುಡುಗಿ ಫೋಟೋ ಆಯ್ಕೆ ಮಾಡುತ್ತಿದ್ದಂತೆ, 2 ಗಂಟೆಗೆ 3 ಸಾವಿರ, ರಾತ್ರಿಯಿಡೀ 6 ಸಾವಿರ, ಆಡಿಯೋ ಕಾಲ್​ 1 ಗಂಟೆಗೆ 500 ರೂಪಾಯಿ, ವಿಡಿಯೋ ಕಾಲ್​ 30 ನಿಮಿಷಕ್ಕೆ 500 ರೂಪಾಯಿ, ಬಾಡಿ ಮಸಾಜ್, ಫುಲ್​ ಡೇ​...ಗೆ ಇಂತಿಷ್ಟು ಎಂದು ರೇಟ್​ ಫಿಕ್ಸ್​ ಇದೆ. ಯಾವುದು ಓಕೆ? ಆ ಗ್ಯಾಂಗ್​ ಮೆಸೇಜ್​ ಕಳಿಸುತ್ತಿತ್ತು... ಹುಡುಗಿಯರ ಜತೆ ಸೇರುವ ಇಂಗಿತ ವ್ಯಕ್ತವಾಗುತ್ತಿದ್ದಂತೆ ಯುವಕರಿಂದ ಮುಂಗಡ ಹಣ ಕಟ್ಟಿಸಿಕೊಂದು ಸ್ವರ್ಗ ತೋರಿಸ್ತೀವಿ ಬನ್ನಿ ಎಂದು ಲೊಕೇಷನ್​ ಶೇರ್​ ಮಾಡ್ತಿದ್ದರು.

ಆನೇಕಲ್ ಪಟ್ಟಣ ಹಾಗೂ ಚಂದಾಪುರ ರಸ್ತೆಯ ಖಾಸಗಿ ಬಡಾವಣೆಯ ಲೊಕೇಷನ್​ಗೆ ಹೋಗಿ ಗ್ರಾಹಕರು ಕಾಲ್​ ಮಾಡಿದ್ರೆ ನೋ ರೆಸ್ಪಾನ್ಸ್​. ನಂಬರ್​ ಬ್ಲಾಕ್​/ ನಾಟ್​ ರೀಚಬಲ್​ ಆಗಿರೋದು... ಮರ್ಯಾದೆಗೆ ಹೆದರಿ ಹಣ ಕಳೆದುಕೊಂಡವರು ಯಾರ ಬಳಿಯೂ ಈ ಬಗ್ಗೆ ಹೇಳಿಕೊಳ್ಳದ ಕಾರಣ ದಂಧೆಕೋರರಿಗೆ ಇದು ಬಂಡವಾಳವಾಯ್ತು. ಹಣ ಕಳೆದುಕೊಂಡ ಯುವಕನೊಬ್ಬ ದಿಗ್ವಿಜಯ ನ್ಯೂಸ್​ ಬಳಿ ಅಳಲು ತೋಡಿಕೊಂಡಿದ್ದು, ಆ ಗ್ಯಾಂಗ್​ ವೊಡ್ಡಿದ ಆಮಿಷ, ಕಳಿಸಿದ ಮೆಸೇಜ್​, ಫೋಟೋ ಎಲ್ಲವನ್ನೂ ಬಯಲು ಮಾಡಿದ್ದಾರೆ.

ಚಂದಾಪುರ ರಸ್ತೆಯ ಖಾಸಗಿ ಬಡಾವಣೆಯ ಮನೆಯೊಂದರಲ್ಲಿ ಮಾಂಸದಂಧೆ ನಡೆಯುತ್ತಿದ್ದು, ರಾತ್ರಿ ಆಗುತ್ತಿದ್ದಂತೆ ಕೆಲ ವಿದ್ಯಾರ್ಥಿಗಳೂ ಭಾಗಿಯಾಗಿದ್ದಾರೆ. ಈ ದಂಧೆ ಮೂಲಕ ಹಣ ಪೀಕುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದರೂ ಸುಮ್ಮನಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net