ಸಿದ್ಧಗಂಗಾ ಶ್ರೀಗಳ ಸಿದ್ಧಾಂತ ನರೇಂದ್ರ ಮೋದಿಗೂ ಸ್ಫೂರ್ತಿ, ದೇಶ ಕಂಡ ಪ್ರತ್ಯಕ್ಷ ದೇವರಿಗೆ ಕೋಟಿ ನಮನ: ಅಮಿತ್​ ಶಾ

1259561
Published on

ತುಮಕೂರು: ನಮ್ಮ ದೇಶ ಪುರಾತನ ಹಿನ್ನೆಲೆಯುಳ್ಳ ದೇಶ. ಅಂತಹ ದೇಶದಲ್ಲಿ ಹಲವು ಸಿದ್ಧಪುರುಷರು ಜನ್ಮವೆತ್ತಿದ್ದಾರೆ. ಆಧುನಿಕ ಯುಗದ ಬಸವಣ್ಣ, ಜೀವಂತ ದೇವರು ಅಂದ್ರೆ ಡಾ.ಶಿವಕುಮಾರ ಸ್ವಾಮೀಜಿ. ಉತ್ತರದಲ್ಲಿ ಗಂಗೆ... ದಕ್ಷಿಣದಲ್ಲಿ ಸಿದ್ಧಗಂಗೆ.. ಯುಗಯುಗ ಕಳೆದರೂ ಶ್ರೀಗಳ ಹೆಸರು ಅಜರಾಮರ. ದೇಶ ಕಂಡ ಪ್ರತ್ಯಕ್ಷ ದೇವರಿಗೆ ನನ್ನ ಕೋಟಿ ಕೋಟಿ ನಮನಗಳು ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಹೇಳಿದರು.

ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವ ಪ್ರಯುಕ್ತ ಸಿದ್ಧಗಂಗಾ ಕ್ಷೇತ್ರದಲ್ಲಿ ಆಯೋಜಿಸಿದ್ದ 'ನಡೆದಾಡುವ ದೇವರ ಬಸವ ಭಾರತ’ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್​ ಶಾ, ಶ್ರೀಮಠದ ತ್ರಿವಿಧ ದಾಸೋಹ ಪರಂಪರೆಯನ್ನ ಕೊಂಡಾಡಿದರು. ಅನ್ನ, ಅಕ್ಷರ, ಆಶ್ರಯ ದಾಸೋಹವನ್ನು ಲಕ್ಷಾಂತರ ಮಕ್ಕಳಿಗೆ ನೀಡುವ ಮೂಲಕ ನಡೆದಾಡುವ ದೇವರೆನಿಸಿದರು. ಅವರ ನಡೆ-ನುಡಿ ಎಲ್ಲ ಕಾಲಕ್ಕೂ ಆದರ್ಶಣಿಯ ಎಂದರು.

ಸಿದ್ಧಗಂಗಾ ಶ್ರೀಗಳ ತ್ರಿವಿಧ ದಾಸೋಹ ನೀತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪಾಲಿಸುತ್ತಿದ್ದಾರೆ. ಇಲ್ಲಿನ ಸಿದ್ಧಾಂತ ಮೋದಿ ಅವರಿಗೂ ಸ್ಫೂರ್ತಿಯಾಗಿದೆ. ಶ್ರೀಗಳ ಲಿಂಗೈಕ್ಯದ ಬಳಿಕವೂ ಶ್ರೀಮಠದಲ್ಲಿ ಸೇವೆ ಮುಂದುವರಿಯುತ್ತಿದೆ. ಇದನ್ನು ನೋಡಿ ತಂಬಾ ಆನಂದವಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ ಧನ್ಯವಾದಗಳು ಎಂದರು ಅಮಿತ್​ ಶಾ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net