

ತುಮಕೂರು: ಶಿಕ್ಷಣ ಕ್ಷೇತ್ರಕ್ಕೆ ಸಿದ್ಧಗಂಗಾ ಕ್ಷೇತ್ರದ ಕಾಯಕ ಯೋಗಿ ಲಿಂ. ಡಾ.ಶಿವಕುಮಾರ ಶ್ರೀಗಳ ಕೊಡುಗೆ ಅಗಾಧ. ಮುಂದಿನ ಪೀಳಿಗೆಗೆ ಪೂಜ್ಯರ ನಡೆ-ನುಡಿಯನ್ನ ಪರಿಚಯಿಸಲು ಶಾಲಾ ಪಠ್ಯದಲ್ಲಿ ಅವರ ಜೀವನ ಚರಿತ್ರೆಯನ್ನು ಅಳವಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾಡಿದರು.
ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವ ಪ್ರಯುಕ್ತ ಸಿದ್ಧಗಂಗಾ ಕ್ಷೇತ್ರದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಭಾಷಣ ಮಾಡಿದ ಯಡಿಯೂರಪ್ಪ, ಶಿವಕುಮಾರ ಶ್ರೀಗಳ ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಪಠ್ಯವನ್ನಾಗಿ ಅಳವಡಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಯಡಿಯೂರಪ್ಪ ಮನವಿ ಮಾಡಿದರು.
ಇದಕ್ಕೂ ಮುನ್ನ ಮಾತನಾಡಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಬಸವಣ್ಣನವರ ಭಾತೃತ್ವ ಮತ್ತು ಸಮಾನತೆ ಪ್ರತಿಪಾದನೆ ಮಾಡುವ ಆ ಬಸವ ಭಾರತ ನಮಗೆ ಬೇಕಿದೆ. ಇಡೀ ಭಾರತ ಬಸವ ಭಾರತ ಆಗಬೇಕು. ಬಸವ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಸಮಾನತೆಯ, ಬಾತೃತ್ವದ ಭಾರತ ನಮಗೆ ಬೇಕಿದೆ ಎಂದು ಸೂಚ್ಯವಾಗಿ ಹೇಳಿದರು.