ಶಕ್ತಿಧಾಮಕ್ಕೆ ನಟ ವಿಶಾಲ್​ ಭೇಟಿ: ಪ್ರತಿ ಮಕ್ಕಳಲ್ಲೂ ಒಂದೊಂದು ದೇವರನ್ನ ನೋಡಿದೆ...

actor vishal
Published on

ಮೈಸೂರು: ಶಕ್ತಿಧಾಮಕ್ಕೆ ಶನಿವಾರ ತಮಿಳು ನಟ ವಿಶಾಲ್ ಭೇಟಿ ನೀಡಿ ಮಕ್ಕಳೊಂದಿಗೆ ಕೆಲ ಕಾಲ ಕಳೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಶಾಲ್​, ನಾನು ಶಕ್ತಿಧಾಮದ ಸ್ವಯಂ ಸೇವಕನಾಗಿರುತ್ತೇನೆ. ಇದಕ್ಕೆ ಡಾ.ರಾಜ್ ಕುಮಾರ್​ ಕುಟುಂಬದವರು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

ಶಕ್ತಿಧಾಮ ನನಗೆ ದೇವಸ್ಥಾನದ ಅನುಭವ ನೀಡಿತ್ತು. ದೇವಸ್ಥಾನಕ್ಕೆ ಹೋದ್ರೆ ಒಂದು ದೇವರ ದರ್ಶನ ಪಡೆಯಬಹುದು. ಇಲ್ಲಿ ಪ್ರತಿ ಮಕ್ಕಳಲ್ಲೂ ಒಂದೊಂದು ದೇವರನ್ನ ನೋಡಿದೆ. ಮಕ್ಕಳು ತುಂಬಾ ಲವಲವಿಕೆಯಿಂದ ಇದ್ದಾರೆ. ಪುನೀತ್ ರಾಜ್​ಕುಮಾರ್ ಮತ್ತು ಗೀತಮ್ಮ ಅವರದ್ದು ಅತ್ಯುತ್ತಮವಾದ ಕೆಲಸ ಎಂದರು.

ಇಲ್ಲಿನ ಮಕ್ಕಳ ಜತೆ ಮಾತನಾಡಿದೆ. ಖುಷಿ ಆಯ್ತು. ಮಕ್ಕಳು ಡಾನ್ಸ್ ಮಾಡಿದ್ರು, ಆಟವಾಡಿದ್ರು. ತುಂಬಾ ಉತ್ಸಾಹದಿಂದ ಇದ್ದಾರೆ. ಇಲ್ಲಿರುವ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಇದೆ. ಶಕ್ತಿಧಾಮದ ಮಕ್ಕಳು ಸಮಾಜಕ್ಕೆ ದೊಡ್ಡ ಕೊಡುಗೆ ಕೊಡ್ತಾರೆ ಎಂದು ವಿಶಾಲ್​ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net