ಜೇಮ್ಸ್​ಗೂ ಕಾಶ್ಮೀರ್​ ಫೈಲ್ಸ್​ಗೂ ಸಂಬಂಧವಿಲ್ಲ: ಸಿಎಂ ಭೇಟಿ ಬಳಿಕ ಶಿವಣ್ಣ ಪ್ರತಿಕ್ರಿಯೆ

New Project(10)
Published on

ಬೆಂಗಳೂರು: ನಟ ಪುನೀತ್​ರಾಜ್​ಕುಮಾರ್​ ಅವರ ಕೊನೇ ಸಿನಿಮಾ ಜೇಮ್ಸ್​ ಯಶಸ್ವೀ ಪ್ರದರ್ಶನ ಕಾಣುತ್ತಿದ್ದರೂ ಥಿಯೇಟರ್​ಗಳಿಂದ ಜೇಮ್ಸ್​ ಸಿನಿಮಾವನ್ನ ತೆಗೆಯಲಾಗುತ್ತಿದೆ ಎಂಬ ವ್ಯಾಪಕವಾಗಿ ಹಬ್ಬಿದ್ದು, ಅಪ್ಪು ಅಭಿಮಾನಿಗಳ ಆಕ್ರೋಶ ಭುಗಿಲೆದ್ದಿದೆ. ಈ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಗುರುವಾರ ಬೆಳಗ್ಗೆ ಶಿವರಾಜ್​ಕುಮಾರ್​ ದಂಪತಿ ಭೇಟಿಯಾಗಿ ಚರ್ಚಿಸಿದರು.

ಬಳಿಕ ಮಾತನಾಡಿದ ಸುದ್ದಿಗಾರರ ಜತೆ ಮಾತನಾಡಿದ ಶಿವಣ್ಣ, ಜೇಮ್ಸ್​ಗೂ ಕಾಶ್ಮೀರ್​ ಫೈಲ್ಸ್​ ಸಿನಿಮಾಗೂ ಯಾವುದೇ ಸಂಭದವಿಲ್ಲ. ನಾಮ್ಮ ಕುಟುಂಬ ಒಳ್ಳೆಯ ಸಿನಿಮಾಗೆ ಯಾವತ್ತೂ ಅಡ್ಡಿ ಮಾಡಿಲ್ಲ. ನಮ್ಮ ತಂದೆ ಕಾಲದಿಂದಲೂ ಅಡ್ಡಿ ಮಾಡಿಲ್ಲ. ಆದರೆ RRR ಸಿನಿಮಾ ಬಿಡುಗಡೆಯಿಂದ ಜೇಮ್ಸ್ ಸಿನಿಮಾ ಥಿಯೇಟರ್​ಗಳು ಕಡಿಮೆಯಾಗಿವೆ ಎಂದರು.

ಜೇಮ್ಸ್ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಿನಿಮಾ ನೋಡಲು ಬರುವಂತೆ ಆಹ್ವಾನ ಮಾಡಿದ್ವಿ ಅಷ್ಟೇ. ನಾನು ಎಲ್ಲೂ ದಿ ಕಾಶ್ಮೀರ್ ಫೈಲ್ಸ್​ ಸಿನಿಮಾದಿಂದ ಜೇಮ್ಸ್​ಗೆ ಸಮಸ್ಯೆ ಆಗ್ತಿದೆ ಎಂದಿಲ್ಲ. RRR ಸಿನಿಮಾದಿಂದ ಸ್ವಲ್ಪ ಅಡ್ಡಿ ಆಗಿದೆ. ಜೇಮ್ಸ್ 386 ಥಿಯೇಟರ್​ಗಳಲ್ಲಿ ರಿಲೀಸ್​ ಆಗಿತ್ತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net