ಇಡೀ ರಾಜ್ಯವೇ ಬೆಚ್ಚಿಬೀಳುವ ಸುದ್ದಿ... ಬೆಂಗಳೂರು ಮೂಲದ ಯುವಕನಿಂದಲೇ ನಡೆದಿತ್ತು ಮಹಾ ಸಂಚು

madesh perumal
Published on

ಬೆಂಗಳೂರು: ಇದು ರಾಜ್ಯವೇ ಬೆಚ್ಚಿಬೀಳೋ ಸುದ್ದಿ. ಸ್ವಲ್ಪ ಯಾಮಾರಿದ್ರೂ ಘನಘೋರ ಕೃತ್ಯ ಸಂಭವಿಸುತ್ತಿತ್ತು. ಇಲ್ಲೇ ಹುಟ್ಟಿ, ಇಲ್ಲೇ ಬೆಳೆದಿದ್ದ ಹಿಂದು ಯುವಕನೊಬ್ಬ ದೇಶದಲ್ಲಿ ವಿದ್ವಂಸಕ ಕೃತ್ಯವೆಸಗಲು ಮಹಾ ಸಂಚು ರೂಪಿಸಿದ್ದ. ಅಫ್ಘಾನಿಸ್ತಾನದ ಉಗ್ರ ಸಂಘಟನೆಗೆ ಸೇರಲು ಸಜ್ಜಾಗಿದ್ದ. ಇನ್ನು ಕೆಲ ದಿನ ಈತನನ್ನು ಬಂಧಿಸದೇ ಇದ್ದಿದ್ದರೆ ದೇಶ ರಕ್ಕಸ ನಾಡಾಗುತ್ತಿತ್ತು!

ಹೌದು, ನಾವು ಈಗ ಹೇಳುತ್ತಿರುವುದು ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ಎನ್​ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ) ಅಧಿಕಾರಿಗಳಿಂದ ಬಂಧನಕ್ಕೊಳಪಟ್ಟ ಯುವಕ ಮಾದೇಶ್ ಪೆರುಮಾಳು ಅಲಿಯಾಸ್​ ಅಬ್ದುಲ್ಲಾ ಬಗ್ಗೆ. ಬೆಂಗಳೂರು ಮೂಲದ ಈ ಯುವಕ ಭಾರತದಲ್ಲಿ ವಿದ್ವಂಸಕ ಕೃತ್ಯವೆಸಗುವುದಾಗಿ ಒಪ್ಪಿಕೊಂಡಿದ್ದ ಎನ್ನಲಾಗುತ್ತಿದೆ. ಪಿಯುಸಿ ಅನುತ್ತೀರ್ಣನಾಗಿದ್ದ ಮಾದೇಶ್, ವಿದೇಶಕ್ಕೆ ಹೋಗಿ ಹ‌ಣ ಸಂಪಾದನೆ ಮಾಡುವೆ. ಅದಕ್ಕೆ ನನಗೆ ಹಣ ಕೊಡಿ ಎಂದು ಮನೆಯಲ್ಲಿ‌‌ ಪೊಷಕರ‌ ಬಳಿ ಮಾದೇಶ್​ ಹಣ‌ ಕೇಳಿದ್ದನಂತೆ. ಆದರೆ ಪೋಷಕರು ನಿರಾಕರಿಸಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಆ್ಯಪ್​ಗಳ ಮೂಲಕ ಐಸಿಸ್ ಸಂಪರ್ಕ ಮಾಡಿದ್ದ. ಟೆಲಿಗ್ರಾಂ, ಸಿಗ್ನಲ್​ನಂತಹ ಆ್ಯಪ್ ಬಳಸಿ ಐಸಿಸ್-ಕೆಪಿ ಸಂಘಟನೆ ಸಂಪರ್ಕಿಸಿ, ತಾನು ದೇಶ ಮತ್ತು ವಿದೇಶದಲ್ಲಿ ವಿದ್ವಂಸಕ ಕೃತ್ಯ ಎಸಗುವುದಾಗಿ ಒಪ್ಪಿಕೊಂಡಿದ್ದನಂತೆ. ಆದರೆ, ಮಾದೇಶ್ ಮೇಲೆ ನಂಬಿಕೆ ಇರದ ಕಾರಣ ಉಗ್ರ ಸಂಘಟನೆ ನಿರಾಕರಿಸಿತ್ತಂತೆ. ವಿದೇಶಕ್ಕೆ ಹೋಗಿ ಹ‌ಣ ಸಂಪಾದನೆ ಮಾಡುವೆ. ಅದಕ್ಕೆ ನನಗೆ ಹಣ ಕೊಡಿ ಎಂದು ಮನೆಯಲ್ಲಿ‌‌ ಪೋಷಕರ‌ ಬಳಿ ಮಾದೇಶ್​ ಹಣ‌ ಕೇಳಿದ್ದನಂತೆ. ಆದರೆ ಪೋಷಕರು ನಿರಾಕರಿಸಿದರು ಎಂದು ವಿಚಾರಣೆ ವೇಳೆ ಬಹಿರಂಗಗೊಂಡಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಎನ್​ಐಎ ಹಾಗೂ ಸ್ಥಳೀಯ ಪೊಲೀಸರು ಆರೋಪಿಯನ್ನ ಬಂಧಿಸಿದ್ದರು. ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net