ಎಸಿಬಿ ದಾಳಿ: ಇಂಜಿನಿಯರ್ ಹರೀಶ್ ಮನೆಯಲ್ಲಿ ಚಿನ್ನದ ತಟ್ಟೆ ಸೇರಿ 2 ಕೆಜಿ ಚಿನ್ನಾಭರಣ, ನಗದು, ಮಹತ್ವದ ದಾಖಲೆ ಪತ್ತೆ

acb raid udupi
Published on

ಉಡುಪಿ: ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿಯಾಗಿದ್ದು, ಚಿನ್ನದ ತಟ್ಟೆ ಸೇರಿ ಅಪಾರ ಪ್ರಮಾಣದ ಚಿನ್ನಾಭರಣ ಮತ್ತು ನಗದು ಪತ್ತೆಯಾಗಿದೆ.

ಹರೀಶ್​ನ ವಿರುದ್ಧ ಗುತ್ತಿಗೆದಾರರು ಎಸಿಬಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ. ಹರೀಶ್ ಉಡುಪಿಯ ಕೊರಂಗ್ರಪಾಡಿಯಲ್ಲಿರುವ ಹರೀಶ್​ರ ಮನೆಯೇ ಒಂದೂವರೆ ಕೋಟಿ ಬೆಲೆ ಬಾಳುತ್ತೆ. ಇಂದು ಬೆಳ್ಳಂಬೆಳಗ್ಗೆ ಹರೀಶ್ ಮನೆ​ ಸೇರಿ ರಾಜ್ಯಾದ್ಯಂತ 80 ಕಡೆಗಳಲ್ಲಿ ಒಟ್ಟು 21 ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಎಸಿಬಿ ಏಕಕಾಲಕ್ಕೆ ದಾಳಿ ಮಾಡಿದೆ.

ಹರೀಶ್​ ಮನೆಯಲ್ಲಿ ಚಿನ್ನದ ತಟ್ಟೆ, ಚಿನ್ನದ ತಗಡು, 15ಕ್ಕೂ ಹೆಚ್ಚು ಚಿನ್ನದ ಬಳೆ, 30ಕ್ಕೂ ಹೆಚ್ಚು ಚಿನ್ನದ ಸರ, ನೆಕ್ಲೆಸ್‌, ಬ್ರಾಸ್ಲೆಟ್‌ ಸೇರಿ ಎರಡು ಕೆಜಿ ಚಿನ್ನಾಭರಣ, ಸುಮಾರು 5 ಲಕ್ಷ ರೂಪಾಯಿ ನಗದು, ದುಬಾರಿ ಬೆಲೆಯ ವಾಚು, ಮೂರು ವಾಹನ, ಅಲ್ಲದೆ ಆಸ್ತಿ ಪತ್ರ ದಾಖಲೆಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಎಸಿಬಿ ಡಿವೈಎಸ್ಪಿ ಮಂಜುನಾಥ ಕವರಿ ಸೇರಿ 15 ಅಧಿಕಾರಿಗಳ ತಂಡ ಮಹತ್ವದ ದಾಖಲೆಗಾಗಿ ಪರಿಶೀಲನೆ ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net