ಒಂದು ಕುಳದ ಮೇಲೆ ಎಸಿಬಿ ಬೀಸಿದ ಬಲೆಗೆ ಮತ್ತೊಬ್ಬನೂ ಬಿದ್ದ! ಬಾಗಲಕೋಟೆ ನಿರ್ಮಿತಿ ಕೇಂದ್ರದ ಇಬ್ಬರ ಮನೆ ಮೇಲೆ ದಾಳಿ

acb raid
Published on

ಬಾಗಲಕೋಟೆ: ಶುಕ್ರವಾರ ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ 80 ಕಡೆಗಳಲ್ಲಿ 21 ಭ್ರಷ್ಟ ಅಧಿಕಾರಿಗಳ ಮನೆಯ ಮೇಲೆ ಎಸಿಬಿ ದಾಳಿ ಮಾಡಿದ್ದು, ಬಗೆದಷ್ಟು ಆಳ ಎಂಬಂತಾಗಿದೆ ಅಕ್ರಮದ ವಾಸನೆ. ಬಾಗಲಕೋಟೆ ನಿರ್ಮಿತಿ ಕೇಂದ್ರದ ಅಧಿಕಾರಿ ಶಂಕರ ಗೋಗಿ ಅವರ ಮನೆ ಮೇಲೆ ದಾಳಿ ಮಾಡಿದ ಎಸಿಬಿ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಮಲ್ಲೇರಾವ್ ದೇಸಾಯಿ ಮನೆ ಮೇಲೂ ದಾಳಿ ಮಾಡಿದೆ. ಒಂದು ಕುಳದ ಮೇಲೆ ಎಸಿಬಿ ಬೀಸಿದ ಬಲೆಗೆ ಮತ್ತೊಬ್ಬನೂ ಬಿದ್ದಂತಾಗಿದೆ.

ನವನಗರದ ಸೆಕ್ಟರ್ ನಂಬರ್ 55ರಲ್ಲಿ ಇರುವ ಶಂಕರ ಗೋಗಿ ನಿವಾಸದಲ್ಲಿ ಚಿನ್ನಾಭರಣ, ಬೆಳ್ಳಿ, ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ. ಆದಾಯಕ್ಕಿಂತ ಅಂದಾಜು ನೂರಾರು ಪಟ್ಟು ಆಸ್ತಿ ಪತ್ತೆಯಾಗಿದೆ ಎನ್ನಲಾಗಿದೆ. ಗೋಗಿ ಆಪ್ತ, ಬಾಗಲಕೋಟೆಯ ಅಕ್ಕಿಮರಡಿ ಲೇಔಟ್​ನ ನಿವಾಸಿ ಮಲ್ಲೇರಾವ್ ದೇಸಾಯಿ ಅವರ ಮನೆಯಲ್ಲೂ ಅಪಾರ ಚಿನ್ನಾಭರಣ ಪತ್ತೆಯಾಗಿದೆ. ಗೋಗಿ ಹೆಸರಲ್ಲಿ ಇನೋವಾ ಕಾರು, ಮಹಿಂದ್ರಾ ಎಕ್ಸ್ಯೂವಿ 500 ಕಾರು ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net