ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಜಾಲ ಸಕ್ರಿಯ! ಡಿಎಚ್​ಒ ನೇತೃತ್ವದ ತಂಡ ದಾಳಿ, ಗರ್ಭಿಣಿಯರಿಬ್ಬರ ರಕ್ಷಣೆ

Abortion
Published on

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಜಾಲ ಸಕ್ರಿಯವಾಗಿದೆಯಾ ಎಂಬ ಅನುಮಾನ ದಟ್ಟವಾಗಿ ಮೂಡಿದ್ದು, ಡಿಎಚ್ಒ ಡಾ.ಧನಂಜಯ ನೇತೃತ್ವದ ತಂಡ ಮನೆಯೊಂದರ ಮೇಲೆ ದಾಳಿ ಮಾಡಿದ ಪ್ರಕರಣ ಇದಕ್ಕೆ ಪುಷ್ಟಿ ನೀಡಿದೆ.

ನಿಷೇಧದ ನಡುವೆಯೂ ಕೆಲ ನೀಚರು ಮಂಡ್ಯದಲ್ಲಿ ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದು, ಹೆಣ್ಣು ಮಗು ಎಂದು ಗೊತ್ತಾದ ಮೇಲೆ ಕೆಲವರು ಭ್ರೂಣ ಹತ್ಯೆಗೆ ಮುಂದಾಗುತ್ತಿದ್ದಾರೆ. ಹೆಣ್ಣು ಭ್ರೂಣ ಹತ್ಯೆಗಾಗಿ ಅಕ್ಕ-ಪಕ್ಕದ ಜಿಲ್ಲೆಯಿಂದಲೂ ಇಲ್ಲಿಗೆ ಗರ್ಭಿಣಿಯರನ್ನ ಕರೆತರಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಂಡ್ಯ ತಾಲೂಕಿನ ಕಾರಸವಾಡಿ ಗ್ರಾಮದ ಮನೆಯೊಂದರ ಮೇಲೆ ಆರೋಗ್ಯ ಇಲಾಖೆ ಮತ್ತು ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದಾರೆ. ಹೆಣ್ಣು ಭ್ರೂಣ ತೆಗೆಸಲು ಕರೆದುಕೊಂಡು ಬಂದಿದ್ದ ಗರ್ಭಿಣಿಯೊಬ್ಬರನ್ನ ರಕ್ಷಣೆ ಮಾಡಲಾಗಿದೆ.

ಭ್ರೂಣ ಹತ್ಯೆ ನಡೆಸುತ್ತಿದ್ದ ನರ್ಸ್​ವೊಬ್ಬರು ಮಂಡ್ಯದ ನಮ್ಮ ಮನೆ ಪಾಲಿ ಕ್ಲಿನಿಕ್​ನಲ್ಲಿ ಕೆಲಸ ಮಾಡುತ್ತಿದ್ದರಿಂದ, ಆ ಕ್ಲಿನಿಕ್​ ಮೇಲೂ ದಾಳಿ ಮಾಡಲಾಗಿದೆ. ಕ್ಲಿನಿಕ್ ಸಿಬ್ಬಂದಿಯನ್ನ ವಿಚಾರಣೆ ನಡೆಸಿ ದಾಖಲೆ ಸಂಗ್ರಹ ಮಾಡಲಾಗಿದೆ. ಕ್ಲಿನಿಕ್​ಗೆ ಮಳವಳ್ಳಿಯಿಂದ ಬಂದಿದ್ದ ಗರ್ಭಿಣಿಯನ್ನೂ ರಕ್ಷಣೆ ಮಾಡಿ ವಿಚಾರಣೆ ನಡೆಸಲಾಗಿದೆ. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net