ಶಾಲೆಯಲ್ಲಿ ಅವಮಾನ: ಬೆಂಗಳೂರಲ್ಲಿ 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

New Project(15)
Published on

ಬೆಂಗಳೂರು: ಶಾಲೆಯಲ್ಲಿ ಅವಮಾನ ಆಯಿತೆಂದು ಮನನೊಂದ 8ನೇ ತರಗತಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯನಗರದಲ್ಲಿ ಸಂಭವಿಸಿದೆ.

ಧೀರಜ್ (14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ರಾಜರಾಜೇಶ್ವರಿನಗರ ಸಮೀಪದ ಸ್ವರ್ಗರಾಣಿ ಸ್ಕೂಲ್ ಆ್ಯಂಡ್ ಪಿಯು ಕಾಲೇಜಿನಲ್ಲಿ ಓದುತ್ತಿದ್ದ.

ಬುಧವಾರ ಶಾಲೆಯಲ್ಲಿ ಪರೀಕ್ಷೆ ಬರೆಯುವಾಗ ಧೀರಜ್​ ಕಾಪಿ ಮಾಡುತ್ತಿದ್ದ ಎನ್ನಲಾಗಿದೆ. ಇದನ್ನ ಗಮನಿಸಿದ ಶಿಕ್ಷಕರು ಪೋಷಕರಿಗೆ ಮಾಹಿತಿ ನೀಡಿದ್ದರು. ಧೀರಜ್​ನಿಂದ ಪ್ರಾಂಶುಪಾಲರು ಕ್ಷಮಾಪಣಾ ಪತ್ರ ಬರೆಸಿಕೊಂಡಿದ್ದರು. ಇದರಿಂದ ಮನನೊಂದ ಧೀರಜ್ ಮನೆಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಧೀರಜ್ ಓದಿನಲ್ಲಿ ಸದಾ ಮುಂದಿದ್ದ. ಹೆಚ್ಚಿನ ಅಂಕ ತೆಗೆಯುತ್ತಿದ್ದ. ವಿದ್ಯಾರ್ಥಿ ಒಂದು ವೇಳೆ ತಪ್ಪು ಮಾಡಿದ್ರು ಪರೀಕ್ಷೆ ಬರೆಯೋಕೆ ಅವಕಾಶ ಮಾಡಿಕೊಡಬೇಕಿತ್ತು. ಆದ್ರೆ ಅವಕಾಶ ಕೊಡದೆ ಧೀರಜ್ ಬಗ್ಗೆ ಶಾಲೆಗೆಲ್ಲಾ ತಿಳಿಯುವಂತೆ ಮಾಡಿ ಅವಮಾನಿಸಿದ್ದಾರೆ. ಶಾಲೆಯವರು ಹೀಗೆ ಮಾಡಬಾರದಿತ್ತು ಎಂದು ಇತರ ಮಕ್ಕಳ ಪೋಷಕರು ಶಾಲೆ ಬಳಿ ಆಕ್ರೋಶ ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net