

ಚಿಕ್ಕೋಡಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭದ ಮೊದಲ ದಿನವೇ 6 ಮಂದಿ ನಕಲಿ ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್.ಡಿ. ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದ ಈ 6 ಮಂದಿ, ಬೇರೆ ವಿದ್ಯಾರ್ಥಿಗಳ ಪರವಾಗಿ ಪರೀಕ್ಷೆ ಬರೆಯುತ್ತಿದ್ದರು. ಹಾಲ್ ಟಿಕೆಟ್ ಪರಿಶೀಲನೆ ವೇಳೆ ಎಕ್ಸಾಂಗೆ ಹಾಜರಾಗಿರುವುದು ಅಸಲಿಯಲ್ಲ, ನಕಲಿ ವಿದ್ಯಾರ್ಥಿಗಳು ಎಂದು ಗೊತ್ತಾಗಿದೆ. ಎಕ್ಸ್ಟ್ರನಲ್ಸ್ ಪರಿಕ್ಸಾರ್ಥಿಗಳ ಪರವಾಗಿ ಇವರೆಲ್ಲರೂ ಬಂದಿದ್ದರು.
ರಾಹುಲ್ ಕಿಳ್ಳಿಕೇತರ, ಭಿಮಶಿ ಹುಲಿಕುಂದ, ಕಾರ್ತಿಕ್ ಲಚ್ಚಪ್ಪ ಜಿಕುಂಬಾರ್, ಸಿದ್ದು ಮಾದೇವ್ ಜೋಗಿ, ಮಾಂತೇಶ್ ಸಂಗಪ್ಪ ಡೊಳ್ಳಿನವರ, ಸವಿತಾ ಮಾದೇವ ಹೊಸೂರು ಬಂಧಿತರು. ಚಿಕ್ಕೋಡಿ ಪೊಲೀಸರು ನಕಲಿ ವಿದ್ಯಾರ್ಥಿಗಳ ವಿಚಾರಣೆ ಮುಂದುವರಿಸಿದ್ದಾರೆ.