

ಮುದಗಲ್: ತೃತಿಯ ಮಂತ್ರಾಲಯ ಎಂದು ಕರೆಯಲಾಗುವ ಸ್ಥಳೀಯ ಕಿಲ್ಲಾದಲ್ಲಿರುವ ಶ್ರೀರಾಘವೆಂದ್ರ ಸ್ವಾಮಿಗಳ 352ನೇ ಆರಾಧನೆ ಮಹೋತ್ಸವ ಅ.30 ರಿಂದ ಸೇ.2 ರವರೆಗೆ ಜರುಗಲಿದೆ ಎಂದು ಶ್ರೀಮಠದ ಟ್ರಸ್ಟಿ ನಾರಾಯಣರಾವ್ ದೇಶಪಾಂಡೆ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀಮಠ ನಿರ್ಮಾಣಕ್ಕೆ 50 ವರ್ಷ ತುಂಬುತ್ತಿರುವದರಿಂದ ಈ ವರ್ಷ ಆರಾಧನೆಯಲ್ಲಿ ಗ್ರಂಥಾಲಯ ಉದ್ಘಾಟನೆ ಸೇರಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ಮೂರು ದಿನಗಳ ಕಾಲ ಗುರುರಾಯರ ಉತ್ಸವ, ಪಾದಪೂಜೆ, ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಸೇವೆ ನಡೆಸಲಾಗುವುದು. ಹಸ್ತೋದಕ ರಾಯರ ಅಷ್ಟೋತ್ತರ, ವಿವಿಧ ಭಜನಾ ಮಂಡಳಿಗಳ ಭಜನಾ ಕಾರ್ಯಕ್ರಮ ಜರುಗಲಿದೆ.
ಶ್ರೀಮಠದಲ್ಲಿ ಸ್ವಾಧ್ಯಾಯ ಹೆಸರಿನ ಧಾರ್ಮಿಕ ಗ್ರಂಥಾಲಯ ಮತ್ತು ಶ್ರೀಮಠದಿಂದ ನಡೆಯುತ್ತಿರುವ ಪರಿಮಳ ಗುರುಕುಲದಲ್ಲಿ ಮಕ್ಕಳಿಗಾಗಿ ವಿಶೇಷ ಗ್ರಂಥಾಲಯಕ್ಕೆ ಚಾಲನೆ ದೊರೆಯಲಿದೆ ಎಂದು ಹೇಳಿದರು.
ಸೇ.2 ಉತ್ತರಾರಾಧನೆಯಂದು ಮಹಾರಥೋತ್ಸವ ಜರುಗಲಿದೆ. ಸದ್ಭಕ್ತರು ಉಪನ್ಯಾಸ ಹಾಗೂ ಮೂರು ದಿನಗಳ ಆರಾಧನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಡಾ.ಗುರುರಾಜ ದೇಶಪಾಂಡೆ, ವೆಂಕಟೇಶ ಇದ್ದರು.