ಆ.31ರಿಂದ ಬೊಮ್ಮನಕಟ್ಟೆಯ ರಾಯರ ಮಠದಲ್ಲಿ ಆರಾಧನಾ ಮಹೋತ್ಸವ

bommanakatte rayara matt
ಬೊಮ್ಮನಕಟ್ಟೆಯ ದೇವಂಗಿ ರತ್ನಾಕರ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ
Published on

ಶಿವಮೊಗ್ಗ: ಬೊಮ್ಮನಕಟ್ಟೆಯ ದೇವಂಗಿ ರತ್ನಾಕರ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ.31ರಿಂದ ಸೆಪ್ಟೆಂಬರ್ 2ರವರೆಗೆ ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 352ನೇ ಆರಾಧನಾ ಮಹೋತ್ಸವ ನಡೆಯಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಮಂತ್ರಾಲಯ ಶ್ರೀ ಸುಬುದೇಂದ್ರ ತೀರ್ಥಂಗಳವರ ಆಜ್ಞಾನುಸಾರ ನೂತನ ಮಠ ಪ್ರತಿಷ್ಠಾಪನೆ ಆದ ಬಳಿಕ ಮೊದಲ ಬಾರಿಗೆ ಈ ಆರಾಧನಾ ಮಹೋತ್ಸವ ನಡೆಯುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆ.30ರಂದು ಸಂಜೆ 6ಕ್ಕೆ ಗೋಪೂಜೆ, ಧ್ವಜಾರೋಹಣ, ಧನ, ಧಾನ್ಯ, ಪೂಜೆ ಲಕ್ಷ್ಮೀಪೂಜೆ ಸ್ವಸ್ತಿವಾಚನ, ಮಹಾಮಂಗಳಾರತಿ ಇದೆ. ಆ. 31ರಂದು ಪೂರ್ವಾರಾಧನೆ ಇದ್ದು, ಬೆಳಗ್ಗೆ 5.30ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ.1ರಂದು ಶ್ರೀ ಗುರುರಾಜರ ಮಧ್ಯಾರಾಧನೆ, 2ರಂದು ಉತ್ತಾರಾರಾಧನೆ ನಡೆಯಲಿದೆ. ಮೂರು ದಿನ ಸಂಜೆ 6ರಿಂದ ಭಜನೆ, ವೀಣಾವಾದನ ಮತ್ತು ಪ್ರವಚನ ನಡೆಯಲಿದೆ. ಪಲ್ಲಕ್ಕಿ ಸೇವೆ ಹಾಗೂ ಪ್ರಸಾದ ವಿತರಣೆ ಇದ್ದು, ಸಾರ್ವಜನಿಕರು ಹಾಗೂ ಭಕ್ತರು ತನುಮನ ಧನ ನೀಡಿ ಸಹಕರಿಸುವಂತೆ ಅವರು ವಿನಂತಿಸಿದರು.
ಪ್ರಮುಖರಾದ ಧೀರೇಂದ್ರ ಆಚಾರ್, ಅಶ್ವತ್ಥನಾರಾಯಣ ಶೆಟ್ಟಿ, ಸುಧೀಂದ್ರ, ಮಧುಸೂದನ್ ಕುಬೇರಪ್ಪ, ಪ್ರಶಾಂತ್, ಕೆ.ವಿ.ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ದುರ್ಗಿಗುಡಿಯಲ್ಲಿ ರಾಯರ ಆರಾಧನೆ
ಶಿವಮೊಗ್ಗ: ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನೆ ಆ.31ರಿಂದ ಸೆಪ್ಟಂಬರ್ 2ರವರೆಗೆ ಶ್ರದ್ಧಾಭಕ್ತಿಯಿಂದ ನಡೆಯಲಿದೆ. ಆ.31ರಂದು ಗುರುಗಳ ಪೂರ್ವಾರಾಧನೆ, ಸೆ.1ರಂದು ಪುಣ್ಯದಿನ ಮತ್ತು 2ರಂದು ಮಹಾರಥೋತ್ಸವ ನಡೆಯಲಿದೆ. ಆ.30ರಂದು ಶ್ರೀಮಠದಲ್ಲಿ ಸಾಮೂಹಿಕ ಸತ್ಯನಾರಾಯಣಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಬಾರಿ ಭಕ್ತರ ಅಪೇಕ್ಷೆ ಮತ್ತು ಸಹಕಾರದಿಂದ ಗುರುಗಳಿಗೆ ಸವರ್ಣಕವಚ ಮತ್ತು ಸುವರ್ಣ ಪಾದುಕೆಗಳನ್ನು ಸಮರ್ಪಿಸಲಾಗುವುದು. ಆರಾಧನಾ ಕಾಲದ 3 ದಿನಗಳೂ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಇರಲಿದೆ. ಪ್ರತಿದಿನ ಸಂಜೆ ವಿಶೇಷ ಉತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net