ಮೂರು ಮದ್ವೆ ಆದ್ರೂ ಮುಗಿಯದ ಚೆಲ್ಲಾಟ! 3ನೇ ಗಂಡನಿಗೆ ಪ್ರಾಣಸಂಕಟ

New Project(7)
Published on

ಮೈಸೂರು: ಈಕೆಗೆ ಒಂದಲ್ಲ, ಎರಡಲ್ಲ, ಮೂರು ಮದುವೆ ಆಗಿದೆ. 3ನೇ ಗಂಡನ ಜತೆ ಸಂಸಾರ ನಡೆಸುತ್ತಿದ್ದರೂ ಮತ್ತೊಬ್ಬನ ಜತೆ ಲವ್ಬಿ ಡವ್ವಿ ಶುರುವಿಟ್ಟುಕೊಂಡು ರೆಡ್​ಹ್ಯಾಂಡ್​ ಆಗೇ ಸಿಕ್ಕಿಬಿದ್ದ ಘಟನೆ ರಾಜೀವ್ ನಗರದಲ್ಲಿ ಸಂಭವಿಸಿದೆ.

ಉದಯಗಿರಿಯ ನಿಧಾಖಾನ್​ಗೆ ಈಗಾಗಲೇ 3 ಮದುವೆ ಆಗಿದೆ. ಮೊದಲ ಮತ್ತು 2ನೇ ಗಂಡನಿಂದ ದೂರವಾಗಿರುವ ಈಕೆಗೆ, ಟೆಂಡರ್ ಆ್ಯಪ್ ಮೂಲಕ ರಾಜೀವ್ ನಗರದ ಅಜಾಮ್ ಖಾನ್​ನ ಪರಿಚಯವಾಗಿತ್ತು. ಮೊದಲ ಮದುವೆ ವಿಷ್ಯ ಮುಚ್ಚಿಟ್ಟ ನಿಧಾಖಾನ್​, 2ನೇ ಮದುವೆ ವಿಷಯವನ್ನ ಮಾತ್ರ ಅಜಾಮ್​ಗೆ ಹೇಳಿದ್ದಳು. ಇವರಿಬ್ಬರೂ 2019ರ ನವಂಬರ್ ಮದುವೆ ಆಗಿದ್ದರು.

ಅಜಾಮ್ ಖಾನ್​ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇತ್ತ ಮೈಸೂರಿನಲ್ಲೇ ಇದ್ದ ನಿಧಾಖಾನ್​, ಬೇರೆಬೇರೆ ಯುವಕರ ಜತೆ ಚಾಟಿಂಗ್, ಮೀಟಿಂಗ್​ನಲ್ಲೇ ಬಿಜಿಯಾಗಿದ್ದಳಂತೆ. ಮೂರು ಮದ್ವೆಯಾಗಿದ್ದರೂ ಈಕೆಗೆ ಮತ್ತೊಬ್ಬ ಪ್ರಿಯಕರ ಇದ್ದನಂತೆ. ಆತನ ಜತೆ ಈಕೆ ಇರುವಾಗಲೇ ಎಂಟ್ರಿಕೊಟ್ಟ 3ನೇ ಗಂಡ ಅಜಾಮ್​ ಖಾನ್​, ಪತ್ನಿ-ಪ್ರಿಯಕರನನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ಪತ್ನಿಯ ನಡೆಯನ್ನ ಪ್ರಶ್ನಿಸಿದ ಗಂಡನಿಗೆ ಈಕೆ ಜೀವ ಬೆದರಿಕೆಯನ್ನೂ ಹಾಕಿದ್ದಾಳಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net