ಒಂದೇ ಕುಟುಂಬದ ಮೂವರು ಸಹೋದರರ ಸಾವು!

death
Published on

ಧಾರವಾಡ: ಮಹಾಮಾರಿ ಕರೊನಾಗೆ ಒಂದೇ ಕುಟುಂಬದ ಮೂವರು ಸಹೋದರರು ಬಲಿಯಾಗಿರುವ ದುರ್ಘಟನೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಶಿವಾಜಿ ಬಾಗಲೆ, ದುರ್ಗಪ್ಪ ಬಾಗಲೆ, ಗಂಗಾರಾಮ ಬಾಗಲೆ ಮೃತರು. ಈ ಮೂವರು ಸಹೋದರರು ಧಾರವಾಡದಲ್ಲಿ ಪಾತ್ರೆ ವ್ಯಾಪಾರಿಗಳಾಗಿದ್ದರು.

ಹದಿನೈದು ದಿನದಲ್ಲಿ ಸಂಭವಿಸಿದ ಸಹೋದರರ ಸಾವು ಬಾಗಲೆ ಕುಟುಂಬವನ್ನು ಕಣ್ಣೀರಲ್ಲಿ ಮುಳುಗಿಸಿದೆ. ಮೊದಲು ಬ್ಲಡ್ ಕ್ಯಾನ್ಸರ್‌ನಿಂದ ಶಿವಾಜಿ ಬಾಗಲೆ ಮೃತಪಟ್ಟರು. ಇದಾದ 3 ದಿನಕ್ಕೆ ದುರ್ಗಪ್ಪ ಬಾಗಲೆ ಹೃದಯಾಘಾತದಿಂದ ಸತ್ತರು. 13 ದಿನಕ್ಕೆ ಹಿರಿಯ ಸೋದರ ಗಂಗಾರಾಮ ಬಾಗಲೆ ಕರೊನಾಗೆ ಬಲಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net