ದ್ವಿತೀಯ ಪಿಯು ರಿಸಲ್ಟ್​: ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲೂ ವಿದ್ಯಾರ್ಥಿನಿಯರೇ ಟಾಪರ್​... ಸಂಪೂರ್ಣ ಮಾಹಿತಿ ಇಲ್ಲಿದೆ

puc toppers
Published on

ಬೆಂಗಳೂರು: 2021-22ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು, ಕಲಾ, ವಾಣಿಜ್ಯ, ವಿಜ್ಞಾನ ಸೇರಿ ಮೂರು ವಿಭಾಗದಲ್ಲೂ ವಿದ್ಯಾರ್ಥಿನಿಯರೇ ರಾಜ್ಯಕ್ಕೆ ಟಾಪರ್​ ಆಗಿ ಹೊರ ಹೊಮ್ಮಿದ್ದಾರೆ.

ಕಲಾ ವಿಭಾಗದಲ್ಲಿ 600ಕ್ಕೆ 594 ಅಂಕ ಪಡೆದ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ಇಂದು ಪಿಯು ಕಾಲೇಜಿನ ಶ್ವೇತಾ ಭೀಮಾಶಂಕರ್​ ಮತ್ತು ಮಡಿವಾಳರ ಸಹನಾ ಇಬ್ಬರೂ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಆರ್​ವಿ ಪಿಯು ಕಾಲೇಜು ವಿದ್ಯಾರ್ಥಿನಿ ಸಿಮ್ರಾನ್​ ಸೇಶಾ ರಾವ್​ 598 ಅಂಕ ಪಡೆದು ರಾಜ್ಯಕ್ಕೆ ಟಾಪರ್​ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ನಾಲ್ವರು ವಿದ್ಯಾರ್ಥಿಗಳು 596 ಅಂಕ ಪಡೆದು ಮೊದಲ ರ್ಯಾಂಕ್​ ಬಂದಿದ್ದಾರೆ. ಬೆಂಗಳೂರಿನ ಬಿಜಿಎಸ್ ಪಿಯು ಕಾಲೇಜಿನ ನೀಲು ಸಿಂಗ್​, ಬೆಂಗಳೂರಿನ ಎಸ್​ಟಿ ಕ್ಲಾರೆಟ್ ಕ್ಯಾಂಪಸ್​ ಪಿಯು ಕಾಲೇಜಿನ ಆಕಾಶ್​ ದಾಸ್​, ಚಿಕ್ಕಬಳ್ಳಾಪುರದ ಎಸ್​ಬಿಜಿಎನ್​ಎಸ್​ ರೂರಲ್ ಕ್ಯಾಂಪಸ್​ ಪಿಯು ಕಾಲೇಜಿನ ನೇಹಾ ಬಿ.ಆರ್​., ಬೆಂಗಳೂರಿನ ಜೈನ್ ಪಿಯು ಕಾಲೇಜಿನ ಮಾನವ್​ ವಿನಯ್​ ಕೇಜ್ರಿವಾಲ್​ ಅವರು ವಾಣಿಜ್ಯ ವಿಭಾಗದ ಟಾಪರ್​ಗಳು.

ಕಲಾ ವಿಭಾಗದಲ್ಲಿ 593 ಅಂಕ ಪಡೆದ ನಾಲ್ವರಿಗೆ 2ನೇ ರ‍್ಯಾಂಕ್

ಹುಬ್ಬಳಿಯ ಎಸ್​ಜೆಎಂವಿಎಸ್​ ಮಹಿಳಾ ಪಿಯು ಕಾಲೇಜಿನ ಸಾನಿಕಾ ರವಿಶಂಕರ್​

ಜೇವರ್ಗಿಯ ಶ್ರೀ ಕದಂಬ ಪಿಯು ಕಾಲೇಜಿನ ನಿಂಗಣ್ಣ ಅಗಸರ್​

ಗದಗ ಜಿಲ್ಲೆ ಅನ್ನದಾನೇಶ್ವರ ಪಿಯು ಕಾಲೇಜಿನ ಶಿವರಾಜ್​

ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ಇಂದು ಪಿಯು ಕಾಲೇಜಿನ ಜಿ.ಮೌನೇಶ್

ವಿಜ್ಞಾನ ವಿಭಾಗದಲ್ಲಿ 597 ಅಂಕ ಪಡೆದ ನಾಲ್ವರಿಗೆ 2ನೇ ರ‍್ಯಾಂಕ್

ಮಂಗಳೂರಿನ ಸೇಂಟ್​ ಅಲೋಯ್ಸಿಸ್​ ಪಿಯು ಕಾಲೇಜಿನ ವಿದ್ಯಾರ್ಥಿ ಇಲ್ಹಾಮ್​

ಬೆಂಗಳೂರಿನ ಕ್ರೈಸ್ಟ್​ ಪಿಯು ಕಾಲೇಜಿನ ಸಾಯಿಚಿರಾಗ್​ ಬಿ.

ಮೂಡಬಿದಿರೆಯ ಆಳ್ವಾಸ್​ ಪಿಯು ಕಾಲೇಜಿನ ಶ್ರೀಕೃಷ್ಣ ಪೇಜಥಾಯ ಪಿ.ಎಸ್​.

ಉಡುಪಿಯ ಪೂರ್ಣಪ್ರಜ್ಞಾ ಪಿಯು ಕಾಲೇಜಿನ ಭವ್ಯಾ ನಾಯಕ್​

ವಾಣಿಜ್ಯ ವಿಭಾಗದಲ್ಲಿ 595 ಅಂಕ ಪಡೆದ ಆರು ಮಂದಿಗೆ 2ನೇ ರ‍್ಯಾಂಕ್

ಬೆಂಗಳೂರಿನ ಎಸ್​ಬಿ ಮಹಾವೀರ್ ಜೈನ್ ಪಿಯು ಕಾಲೇಜಿನ ಹಿತೇಶ್​ ಎಸ್​.

ತುಮಕೂರಿನ ವಿದ್ಯಾನಿಧಿ ಪಿಯು ಕಾಲೇಜಿನ ಸಹನಾ ಟಿ.ಆರ್​.

ರಾಮನಗರ ಜಿಲ್ಲೆ ಮಾಗಡಿಯ ಬಿಜಿಎಸ್ ಪಿಯು ಕಾಲೇಜಿನ ಪವಿತ್ರಾ ಕೆ.

ಮೂಡುಬಿದರೆಯ ಆಳ್ವಾಸ್ ಪಿಯು ಕಾಲೇಜಿನ ಸಮರ್ಥ ವಿಶ್ವನಾಥ್​ ಜೋಶಿ

ಮಂಗಳೂರಿನ ಸೇಂಟ್ ಅಲೋಶಿಯಸ್ ಪಿಯು ಕಾಲೇಜಿನ ಅನಿಷಾ ಮಲ್ಯ

ಮಂಗಳೂರಿನ ಕೆನರಾ ಪಿಯು ಕಾಲೇಜಿನ ಅಚಲ್​ ಪ್ರವೀಣ್​ ಉಲ್ಲಾಳ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net