ತುಮಕೂರು: 2021-22ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಈ ಬಾರಿ ಕಲಾ, ವಾಣಿಜ್ಯ, ವಿಜ್ಞಾನ ಸೇರಿ 3 ವಿಭಾಗದಲ್ಲೂ ರಾಜ್ಯಕ್ಕೆ ಒಟ್ಟಾರೆ ಶೇ.61.88 ಫಲಿತಾಂಶ ಬಂದಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯು ರಾಜ್ಯಕ್ಕೆ ಟಾಪರ್ ಆಗಿ ಹೊರ ಹೊಮ್ಮಿದರೆ, ಶೈಕ್ಷಣಿಕ ಜಿಲ್ಲೆ, ಶಿಕ್ಷಣ ಸಚಿವರ ತವರು ತುಮಕೂರು ಜಿಲ್ಲೆ 28ನೇ ಸ್ಥಾನಗಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯು ಶೇ.88.02 ಫಲಿತಾಂಶ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿ ಹೊರ ಹೊಮ್ಮಿದರೆ, ತುಮಕೂರು ಜಿಲ್ಲೆ ಶೇ.58.90 ಫಲಿತಾಂಶ ಪಡೆದು 28ನೇ ಸ್ಥಾನದಲ್ಲಿದೆ. ತುಮಕೂರಿನ ವಿದ್ಯಾನಿಧಿ ಕಾಲೇಜಿನ ಸಹನಾ ಟಿ.ಆರ್. ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ತುಮಕೂರು ಜಿಲ್ಲೆಗೆ ದ್ವಿತೀಯ ಪಿಯು ಫಲಿತಾಂಶದಲ್ಲಿ ಲಭಿಸಿದ ಸ್ಥಾನ
2021-22ನೇ ಸಾಲಿನಲ್ಲಿ 28ನೇ ಸ್ಥಾನ
2020-21ನೇ ಸಾಲಿನಲ್ಲಿ 28ನೇ ಸ್ಥಾನ
2019-20ನೇ ಸಾಲಿನಲ್ಲಿ 17ನೇ ಸ್ಥಾನ
2018-20ನೇ ಸಾಲಿನಲ್ಲಿ 21ನೇ ಸ್ಥಾನ
2017-18ನೇ ಸಾಲಿನಲ್ಲಿ 22ನೇ ಸ್ಥಾನ
2016-17ನೇ ಸಾಲಿನಲ್ಲಿ 23ನೇ ಸ್ಥಾನ
2015-16ನೇ ಸಾಲಿನಲ್ಲಿ 24ನೇ ಸ್ಥಾನ
https://pue.karnataka.gov.in/ ವೆಬ್ಸೈಟ್ನಲ್ಲಿ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದು. ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿರುವ ಮೊಬೈಲ್ ಸಂಖ್ಯೆಗೂ ಫಲಿತಾಂಶದ ಸಂದೇಶ ಕಳುಹಿಸಲಾಗುತ್ತದೆ.
ದ್ವಿತೀಯ ಪಿಯು ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಮೇಲುಗೈ, ಚಿತ್ರದುರ್ಗಕ್ಕೆ ಕೊನೇ ಸ್ಥಾನ
ದಂತ ಚಿಕಿತ್ಸೆಗೆ ಹೋದ ಸ್ಯಾಂಡಲ್ವುಡ್ ನಟಿಯ ಮುಖವೇ ವಿರೂಪ! ವೈದ್ಯೆ ಎಡವಟ್ಟಿಗೆ ನಲುಗಿದ ನಟಿಯ ಕಷ್ಟ ಹೇಳತೀರದು
ಕುಜ ದೋಷಕ್ಕೆ ಮಹಿಳಾ ಪೊಲೀಸ್ ಬಲಿ! ಮದ್ವೆ ನಿರಾಕರಿಸಿ ವಿಷ ಕುಡಿಸಿದ್ದ ಪ್ರಿಯಕರ… ಶಿವಮೊಗ್ಗದಲ್ಲಿ ಮನಕಲಕುವ ಘಟನೆ