ಸನ್ನಿ ಲಿಯೋನ್​ ಫ್ಯಾನ್ಸ್​ಗೆ ಬಂಪರ್​ ಆಫರ್​ ಕೊಟ್ಟ ಮಂಡ್ಯದ ಯುವಕ! ಆದ್ರೆ ಈ 3 ಷರತ್ತು ಪೂರೈಸಲೇಬೇಕು...

New Project(7)
Published on

ಮಂಡ್ಯ: ಸಾಮಾನ್ಯವಾಗಿ ಹಬ್ಬಗಳಲ್ಲಿ ರಿಯಾಯಿತಿ ನೀಡುವುದನ್ನು ನೋಡಿರುತ್ತೀರಿ. ಆದರೆ, ನೀಲಿ ಸಿನಿಮಾ ತಾರೆ ಸನ್ನಿ ಲಿಯೋನ್​ರ ಅಭಿಮಾನಿಯೊಬ್ಬ ಮಂಡ್ಯದಲ್ಲಿ ವರ್ಷಪೂರ್ತಿ ವಿಶೇಷ ಆಫರ್​ ನೀಡುವ ಮೂಲಕ ಗಮನ ಸೆಳೆದಿದ್ದಾನೆ.

ಮಂಡ್ಯ ನಗರದ ಕರ್ನಾಟಕ ಬಾರ್​ ವೃತ್ತದಲ್ಲಿ ಚಿಕನ್​ ಅಂಗಡಿ ಇಟ್ಟುಕೊಂಡಿರುವ ನಟಿ ಸನ್ನಿ ಲಿಯೋನ್​ ಅಭಿಮಾನಿ ಪ್ರಸಾದ್​, ತನ್ನ ಅಂಗಡಿಯಲ್ಲಿ ಚಿಕನ್​ ಖರೀದಿಸುವ ಸನ್ನಿ ಲಿಯೋನ್​ ಅಭಿಮಾನಿಗಳಿಗೆ ಶೇ.10 ಡಿಸ್ಕೌಂಟ್​ ಕೊಡುವುದಾಗಿ ಮಾಹಿತಿ ಫಲಕ ಹಾಕಿಕೊಂಡಿದ್ದಾನೆ. ಸುಮ್ಮನೆ ಬಂದು ಅಭಿಮಾನಿ ಎಂದರೆ ರಿಯಾಯಿತಿ ಸಿಗುವುದಿಲ್ಲ, ಬದಲಿಗೆ ಮೂರು ಪ್ರಮುಖ ಷರತ್ತು ಪೂರೈಸಬೇಕು.

ಸಾಮಾಜಿಕ ಜಾಲತಾಣ ಫೆಸ್​ಬುಕ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಸನ್ನಿ ಲಿಯೋನ್​ ಅವರನ್ನು ಫಾಲೋ ಮಾಡುತ್ತಿರಬೇಕು, ತಮ್ಮ ಮೊಬೈಲ್​ಗಳಲ್ಲಿ ನಟಿಯ ಕನಿಷ್ಠ 10 ಫೋಟೋಗಳನ್ನು ಸಂಗ್ರಹಿಸಿಟ್ಟುಕೊಂಡಿರಬೇಕು, ಅವರ ಎಲ್ಲ ಚಿತ್ರಗಳಿಗೂ ಮೆಚ್ಚುಗೆ ಹಾಗೂ ಕಾಮೆಂಟ್​ ಮಾಡಿರಬೇಕೆಂದು ಷರತ್ತು ಹಾಕಲಾಗಿದೆ. ಇಷ್ಟನ್ನು ಪರಿಶೀಲಿಸಿ ಖಚಿತವಾದ ನಂತರ ಡಿಸ್ಕೌಂಟ್​ ನೀಡಲಾಗುತ್ತದೆ. ಸದ್ಯ ಈ ಫಲಕ ವೈರಲ್​ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net