ಅಯ್ಯೋ ಅಣ್ಣ... ನಾನಷ್ಟು ಗೋಗರೆದ್ರೂ ಊಟ ಮಾಡದೆ ಕೆಲ್ಸ ಇದೆ ಅಂತ ಹೊರಟ್ಯಲ್ಲೋ: ಮಡಿಲಕ್ಕಿ ಕೊಟ್ಟು ಹಿಂತಿರುಗುವಾಗ ಸಾವು

New Project(22)
Published on

ಹೊಳೆಹೊನ್ನೂರು: ಒಡಹುಟ್ಟಿದ ಸಹೋದರಿಗೆ ಮಡಿಲಕ್ಕಿ ಕೊಟ್ಟು ವಾಪಸ್ ಊರಿಗೆ ತೆರಳುತ್ತಿದ್ದ ಅಣ್ಣ ಮಾರ್ಗಮಧ್ಯೆ ದುರಂತ ಅಂತ್ಯಕಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಯ್ಯೋ ಅಣ್ಣ... ಮಧ್ಯಾಹ್ನದ ಊಟ ಮಾಡಿಕೊಂಡು ಹೋಗು ಅಂತ ನಾನು ಅಷ್ಟು ಬಲವಂತ ಮಾಡಿದ್ರೂ ಏನೋ ಕೆಲಸ ಇದೆ ಅಂತ ಆತುರದಲ್ಲೇ ಹೋಗಿಬಿಟ್ಟಲ್ಲೋ... ಆ ಯಮನ ಬಳಿ ಹೋಗೋಕೆ ಮನೆಯಿಂದ ಅಷ್ಟು ಬೇಗ ಹೋದ್ಯೇನೋ... ಊಟ ಮಾಡೋಕಾದ್ರೂ ಕೂತಿದ್ರೆ ಸಾವಿನ ಗಂಡಾಂತರ ತಪ್ಪುತ್ತಿತ್ತಲ್ಲೋ... ಎಂದು ಮೃತನ ತಂಗಿ ಗೋಳಾಡುತ್ತಿದ್ದ ದೃಶ್ಯ ಮನಕಕುವಂತಿತ್ತು.

ಕನಸಿನಕಟ್ಟೆಯ ಮಹೇಶ್ ಮೃತ ದುರ್ದೈವಿ. ದಿಗ್ಗೇನಹಳ್ಳಿಯ ತಂಗಿ ಮನೆಗೆ ಮಡಿಲಕ್ಕಿ ಕೊಟ್ಟು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಮಹೇಶ್​, ವಾಪಸ್ ಊರಿಗೆ ತೆರಳುವ ವೇಳೆ ಆನವೇರಿ ಗ್ರಾಮದ ಬಳಿ ಬೈಕ್‌ನಿಂದ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಾತ್ರೆ ಮುಗಿಸಿಕೊಂಡು ಹೊರಟ ಅಣ್ಣನಿಗೆ ಮಧ್ಯಾಹ್ನದ ಊಟ ಮಾಡಿಕೊಂಡು ಹೋಗುವಂತೆ ತಂಗಿ ಬಲವಂತ ಮಾಡಿದರೂ ಕೆಲಸ ಇದೆ ಎಂದು ಆತುರದಲ್ಲಿ ಹೊರಟಿದ್ದ ಮಹೇಶ್, ಮಾರ್ಗಮಧ್ಯೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಹೇಶ್​ ಮನೆ ಮತ್ತು ತಂಗಿ ಮನೆಯಲ್ಲಿ ಶೋಕ ಮಡುಗಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net