

ಕಾರವಾರ: ಮಂಗಳವಾರದ ಜಿಲ್ಲಾ ಹೆಲ್ತ್ ಬುಲೆಟಿನ್ ವರದಿಯಂತೆ ಜಿಲ್ಲೆಯ 979 ಜನರಿಗೆ ಕೋವಿಡ್ ಸೋಂಕು ಇರುವುದು ಖಚಿತವಾಗಿದೆ. 13 ಜನ ಮೃತಪಟ್ಟಿದ್ದಾರೆ. ಕಾರವಾರದಲ್ಲಿ 155, ಅಂಕೋಲಾ-69, ಕುಮಟಾ-41, ಹೊನ್ನಾವರ-99, ಭಟ್ಕಳ-81, ಶಿರಸಿ-200, ಸಿದ್ದಾಪುರ-64, ಯಲ್ಲಾಪುರ-63, ಮುಂಡಗೋಡ-51, ಜೊಯಿಡಾ-33, ಹಳಿಯಾಳ ಹಾಗೂ ದಾಂಡೇಲಿ ಸೇರಿ 123 ಪ್ರಕರಣಗಳು ಪತ್ತೆಯಾಗಿವೆ. ಕಾರವಾರದಲ್ಲಿ 5, ಕುಮಟಾ, ಶಿರಸಿಯಲ್ಲಿ ತಲಾ 2, ಹೊನ್ನಾವರ, ಭಟ್ಕಳ, ಸಿದ್ದಾಪುರ, ಹಳಿಯಾಳದಲ್ಲಿ ತಲಾ 1 ಸಾವು ಸಂಭವಿಸಿದೆ. 760 ಜನ ಗುಣವಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 6156 ಸಕ್ರಿಯ ಪ್ರಕರಣಗಳಿದ್ದು, 491 ಜನ ಆಸ್ಪತ್ರೆಗಳಲ್ಲಿದ್ದಾರೆ. ಕಾರವಾರದಲ್ಲಿ 846, ಅಂಕೋಲಾದಲ್ಲಿ 565, ಕುಮಟಾದಲ್ಲಿ 455, ಹೊನ್ನಾವರದಲ್ಲಿ 557, ಭಟ್ಕಳದಲ್ಲಿ 432, ಶಿರಸಿಯಲ್ಲಿ 757, ಸಿದ್ದಾಪುರದಲ್ಲಿ 490, ಯಲ್ಲಾಪುರದಲ್ಲಿ 525, ಮುಂಡಗೋಡಿನಲ್ಲಿ 490, ಜೊಯಿಡಾದಲ್ಲಿ 257, ದಾಂಡೇಲಿ ಮತ್ತು ಹಳಿಯಾಳ ಸೇರಿ 1273 ಸಕ್ರಿಯ ಪ್ರಕರಣಗಳಿವೆ.