ಡಬಲ್​ ಡೆಕ್ಕರ್​ಗೆ ರೂ.9,700 ಕೋಟಿ!

doubble decker
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ನಗರದ ಬಹುನಿರೀಕ್ಷಿತ ಮೆಟ್ರೋ 3ನೇ ಹಂತ ವಿಸ್ತರಣೆ ಜತೆಯಲ್ಲಿ ರಾಜಧಾನಿಯ ಅತೀ ಉದ್ದದ (28.486 ಕಿಮೀ)ಡಬಲ್​ ಡೆಕ್ಕರ್​ ನಿರ್ಮಾಣಕ್ಕೆ ಕರ್ನಾಟಕ ಸಚಿವ ಸಂಪುಟದಿಂದ ಅನುಮೋದನೆ ಲಭಿಸಿದ್ದು, 9,700 ಕೋಟಿ ರೂ. ವೆಚ್ಚದ ಕಾಮಗಾರಿ ಶ್ರೀ ಪ್ರಾರಂಭವಾಗಲಿದೆ.

ಡಬಲ್​ ಡೆಕ್ಕರ್​ ರಸ್ತೆಯ ಮೇಲ್ಭಾಗದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ(ಬಿಎಂಆಸಿಎಲ್​) ಎತ್ತರಿಸಿದ ಎರಡು ಪ್ರಮುಖ ಕಾರಿಡಾರ್​ ಹಾದು ಹೋಗಲಿದೆ.

ಮೊದಲ ಕಾರಿಡಾರ್​ ಜೆಪಿ ನಗರ 4ನೇ ಹಂತದಿಂದ ಕೆಂಪಾಪುರದವರೆಗೆ ಹೊರ ವರ್ತುಲ ರಸ್ತೆಯ ಪಶ್ಚಿಮ ಭಾಗದಲ್ಲಿ ನಿರ್ಮಾಣಗೊಳ್ಳಲಿದೆ. ಇದು ಬೆಂಗಳೂರಿನಲ್ಲೇ ಅತಿ ಉದ್ದವಾದ ಅಂದರೆ, 28.486 ಕಿ.ಮೀ. ಡಬಲ್​ ಡೆಕ್ಕರ್​ ಮೇಲ್ಸೇತುವೆ ಒಳಗೊಂಡಿದೆ.

ಎರಡನೇ ಕಾರಿಡಾರ್​ ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆ ವರೆಗೆ 8.635 ಕಿ.ಮೀ. ಡಬಲ್​ ಡೆಕ್ಕರ್​ ಮೇಲ್ಸೇತುವೆಯೊಂದಿಗೆ ವಿಸ್ತರಿಸಲಿದೆ. ಒಟ್ಟಾರೆ 37.121 ಕಿ.ಮೀ.ಗಳಷ್ಟು ಉದ್ದದ ಡಬಲ್​ ಡೆಕ್ಕರ್​ಗಳನ್ನು ನಿರ್ಮಾಣ ಮಾಡುವ ಪ್ರಮುಖ ಯೋಜನೆ ಇದಾಗಿದೆ.

ನಗರದ ಮುಂದಿನ ಎಲ್ಲ ಯೋಜನೆಗಳು ಬಹುತೇಕ ಇದೇ ರೀತಿಯ ಮೆಟ್ರೋ ಮಾರ್ಗಗಳು ಮತ್ತು ರಸ್ತೆಗಳನ್ನು ಸಂಯೋಜಿಸಲಿವೆ.

ಕೇಂದ್ರ ಸರ್ಕಾರವು ಮೆಟ್ರೋ ಮಾರ್ಗಗಳಿಗೆ ಮಾತ್ರ ಹಣವನ್ನು ನೀಡುತ್ತದೆ. ರಾಜ್ಯ ಸರ್ಕಾರ ಡಬಲ್​ ಡೆಕ್ಕರ್​ ನಿರ್ಮಾಣ ವೆಚ್ಚದ ಶೇ.50 ಅನ್ನು ಭರಿಸುತ್ತದೆ. ನಗರ ಸ್ಥಳಿಯ ಸಂಸ್ಥೆಗಳಿಂದ ಶೇ.10 ಮತ್ತು ಶೇ.40 ಸಾಲದ ಮೂಲಕ ಸಂಗ್ರಹಿಸಲಾಗುತ್ತದೆ. 9,700 ಕೋಟಿ ರೂ.ವೆಚ್ಚದಲ್ಲಿ ಸಿವಿಲ್​ ಕೆಲಸಗಳು, ಭೂಸ್ವಾಧಿನ, ವಿನ್ಯಾಸ ಮತ್ತು ಇತರ ವೆಚ್ಚಗಳು ಸೇರಿವೆ. ರಾಜ್ಯವು ಈ ಬಾರಿಯ ಬಜೆಟ್​ನಲ್ಲಿ ನಮ್ಮ ಮೆಟ್ರೋಗಾಗಿ ಈಗಾಗಲೇ 4 ಸಾವಿರ ಕೋಟಿ ರೂ.ವನ್ನು ಮೀಸಲಿಟ್ಟಿದೆ. ಅದರಲ್ಲಿ ಒಂದು ಭಾಗವನ್ನು ಈ ಯೋಜನೆಗೆ ಖರ್ಚು ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆ ವಿಳಂಬ

ನಗರದ ಸಂಚಾರ ಸಿಕ್ಕಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಮೆಟ್ರೋ ಮಾರ್ಗ ಅನುಷ್ಠಾನದ ವೇಳೆ, ಮೆಟ್ರೋ ಮಾರ್ಗಗಳು ಹೋಗುವ ಕಡೆ ಡಬಲ್​ ಡೆಕ್ಕರ್​ ನಿಮಾರ್ಣ ಮಾಡುವುದು ಒಂದೇ ಕಲ್ಲಿನಲ್ಲಿ ಗುರಿ ಇಟ್ಟು, ಎರಡು ಮಾವಿನಹಣ್ಣು ಬೀಳಿಸಿದಂತೆ ಲಪ್ರದ ಯೋಜನೆಯೇ ಆಗಿದೆ.

ಡಬಲ್​ ಡೆಕ್ಕರ್​ ್ಲೆ$ಓವರ್​ನ ರಾಗಿಗುಡ್ಡ&ಸಿಲ್ಕ್​ಬೋರ್ಡ್​ ವರೆಗಿನ ಒಂದು ಭಾಗವನ್ನು ಈಗಾಗಲೇ ಬಿಎಂಆರ್​ಸಿಎಲ್​ ವಾಹನ ಸಂಚಾರಕ್ಕೆ ಮುಕ್ತಗೊಳಿಸಿದ್ದು, 2024 ಜುಲೈ ತಿಂಗಳಿಂದಲೇ ಕಾರ್ಯಾಚರಣೆಯಲ್ಲಿದೆ. ಆದರೆ ಸಿಲ್ಕ್​ಬೋರ್ಡ್​&ರಾಗಿಗುಡ್ಡಕ್ಕೆ ಬರುವ ವಾಹನ ಸಂಚಾರಕ್ಕೆ ಇನ್ನೂ ಮುಕ್ತವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net