

ಹಾಸನ: ಇಲ್ಲಿನ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಟ್ರಕ್ ದುರಂತದಲ್ಲಿ 9 ಜನರು ದುರ್ಮರಣ ಹೊಂದಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.
ಬಳ್ಳಾರಿ ಜಿಲ್ಲೆಯ ಅಂತಿಮ ಬಿಇ ವಿದ್ಯಾರ್ಥಿ ಪ್ರವೀಣ್ ಕುಮಾರ್(22), ಹೊಳೆನರಸೀಪುರ ತಾಲೂಕು ಹಳೆಕೋಟೆ ಹೋಬಳಿ ಕೆ.ಬಿ.ಪಾಳ್ಯದ ರಾಜೇಶ (17), ಹೊಳೆನರಸೀಪುರ ತಾಲೂಕು ಡನಾಯಕನಹಳ್ಳಿ ಕೊಪ್ಪಲು ಗ್ರಾಮದ ಈಶ್ವರ (17), ಹೊಳೆನರಸೀಪುರ ತಾಲೂಕು ಮುತ್ತಿಗೆಹೀರಳ್ಳಿ ಗ್ರಾಮದ ಗೋಕುಲ (17), ಹೊಳೆನರಸೀಪುರ ತಾಲೂಕು ಹಳೇಕೋಟೆ ಹೋಬಳಿ ಕಬ್ಬಿನಹಳ್ಳಿ ಗ್ರಾಮ ಕುಮಾರ (25 ), ಹೊಳೆನರಸೀಪುರ ತಾಲೂಕು ಹಳೇಕೋಟೆ ಹೋಬಳಿ ಕಬ್ಬಿನಹಳ್ಳಿ ಗ್ರಾಮ ಪ್ರವೀಣ (25), ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗವಿಗಂಗಾಪುರ ಗ್ರಾಮದ ಮಿಥುನ್ (23), ಚಿಕ್ಕಮಗಳೂರು ಜಿಲ್ಲೆಯ ಮಣೆನಹಳ್ಳಿ ಮರ್ಲೆ ಗ್ರಾಮದ ಬಿಇ ವಿದ್ಯಾರ್ಥಿ ಸುರೇಶ , ಹಾಸನ ತಾಲೂಕು ಬಂಟರಹಳ್ಳಿಗ್ರಾಮದ ಪ್ರಭಾಕರ್ (55) ಮೃತ ದುರ್ದೈವಿಗಳು.
ಗಾಯಗೊಂಡವರ ವಿವರ: ದರ್ಶನ್(ಬಿಟ್ಟಗೌಡನಹಳ್ಳಿ), ವಿನಯ್ (ಕುಣಿಗಲ್), ವಿಷ್ಣು ಮತ್ತು ದರ್ಶನ್ (ಬೆಲವತ್ತಹಳ್ಳಿ-ಅರಸೀಕೆರೆ), ಅಶೋಕ್ (ಸೋಮವಾರಪೇಟೆ), ಜ್ಞಾನೇಶ್(ಮೊಸಳೆ), ಆದರ್ಶ(ಅಗ್ರಹಾರ,ಅರಕಲಗೂಡು), ಯಶವಂತ್(ಹಾಲೇನಹಳ್ಳಿ, ಶಾಂತಿಗ್ರಾಮ), ಸಂದೀಪ್(ಮಾದಾಪುರ ತಾಂಡ್ಯ-ತುಮಕೂರು), ದೀಕ್ಷಿತ್ (ಚಿಕ್ಕನಾಯಕನಹಳ್ಳಿ-ತುಮಕೂರು),ಅಶೋಕ್(ಮಲ್ಲಾಪುರ-ಬೇಲೂರು), ಶಬ್ಬೀರ್(ಕೊಪ್ಪಳ), ಸಂದೀಪ್ (ಹಿಟ್ನೇಹೆಬ್ಬಾಗಿಲು-ಪಿರಿಯಾಪಟ್ಟಣ), ಅಶ್ವಿತ್ (ಆಲಂದೂರು-ಚಿಕ್ಕಮಗಳೂರು), ಚಂದನ್( ಶಿವಯ್ಯನಕೊಪ್ಪಲು-ಶಾಂತಿಗ್ರಾಮ), ಭುವನೇಶ್(ಶ್ರೀರಾಮದೇವರ ಕಟ್ಟೆ) ಈ 17
ಜನರು ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೃತ್ವಿಕ್(ಸಾರಾಪುರ-ಹಾಸನ) ಮತ್ತು ಮೊಸಳೆಹೊಸಳ್ಳಿ ಗ್ರಾಮದ ಆದರ್ಶ ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ,
ಚಿಕ್ಕನಾಯಕನಹಳ್ಳಿಯ ಮಾಂತೇಶ್ ಜನಪ್ರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.