ಸಾಸಲು ದೇಗುಲದ ಹುಂಡಿಯಲ್ಲಿ 9.29 ಲಕ್ಷ ರೂ. ಸಂಗ್ರಹ

06-kkr1(12-23
Published on

ಕಿಕ್ಕೇರಿ: ಹೋಬಳಿಯ ಪ್ರಸಿದ್ಧ ಅವಳಿ ದೇಗುಲಗಳಾದ ಸೋಮೇಶ್ವರ, ಶಂಭುಲಿಂಗೇಶ್ವರ ದೇವಾಲಯದ ಹುಂಡಿಯಲ್ಲಿ 9,29,720 ರೂ. ಸಂಗ್ರಹವಾಗಿದೆ.
ಈ ಬಾರಿಯ ಕಾರ್ತಿಕ ಮಾಸದಲ್ಲಿನ ಎರಡನೇ ಸುತ್ತಿನ ಹುಂಡಿ ಎಣಿಕೆ ಇದಾಗಿದೆ. ಕಳೆದ ವಾರವಷ್ಟೇ ದೇಗುಲದ ಹುಂಡಿ ಎಣಿಕೆ ಮಾಡಲಾಗಿತ್ತು.

ತಹಸೀಲ್ದಾರ್ ನಿಸರ್ಗಪ್ರಿಯಾ ಮಾರ್ಗದರ್ಶನದಲ್ಲಿ ಎಣಿಕೆ ನಡೆಯಿತು. ಕಾಣಿಕೆಯೊಂದಿಗೆ ಹುಂಡಿಗೆ ಭಕ್ತರು ಬೆಳ್ಳಿಯ ದೀಪ, ತೊಟ್ಟಿಲು, ನಾಗರವನ್ನು ಸಮರ್ಪಿಸಿದ್ದರು. ದೇಗುಲ ಜೀರ್ಣೋದ್ಧಾರ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಮೂಲ ದೇವರಿಗೆ ಬಾಲಾಲಯ ಪ್ರತ್ಯೇಕವಾಗಿ ನಿರ್ಮಿಸಲಾಗಿದ್ದು, ಸುರಕ್ಷತೆ ದೃಷ್ಟಿಯಿಂದ ದೇಗುಲದ ಹುಂಡಿ ಎಣಿಕೆ ಆಗಿಂದಾಗ್ಗೆ ನಡೆಸಲಾಗುತ್ತಿದೆ ಎಂದು ಉಪತಹಸೀಲ್ದಾರ್ ವೀಣಾ ತಿಳಿಸಿದರು.


ಕಾಣಿಕೆ ಹಣವನ್ನು ಸಾಸಲು ಗ್ರಾಮದಲ್ಲಿನ ಬ್ಯಾಂಕ್ ಆಫ್ ಬರೋಡಾದಲ್ಲಿರುವ ದೇಗುಲದ ಮುಜರಾಯಿ ಖಾತೆಗೆ ಜಮೆ ಮಾಡಲಾಯಿತು. ರಾಜಸ್ವ ನಿರೀಕ್ಷಕ ಗೋಪಾಲಕೃಷ್ಣ, ಮುಜರಾಯಿ ಗುಮಾಸ್ತೆ ಪೂರ್ಣಿಮಾ, ಗ್ರಾಮಾಡಳಿತಾಧಿಕಾರಿಗಳಾದ ಸಂಜಯ್, ಸೋಮಾಚಾರ್, ಸುನೀಲ್ ಗಾಣಿಗೇರ, ಶಶಿಕುಮಾರ್ ಮಡ್ಡಿ, ತಿಪ್ಪೇಶ್, ಕಾಂತೇಶ್, ಪ್ರಸನ್ನ, ಪರಿಮಳಾ, ವನಜಾಕ್ಷಿ, ಗ್ರಾಮ ಸಹಾಯಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net