9.13 ಲಕ್ಷ ರೂ. ಮೌಲ್ಯದ ಮದ್ಯ ವಶ

16KWR5
Published on

ಕಾರವಾರ: ಖಾಲಿ ಪ್ಲಾಸ್ಟಿಕ್ ಟ್ರೇ ತುಂಬಿಕೊಂಡು ಹೋಗುತ್ತಿದ್ದ ಆಂಧ್ರಪ್ರದೇಶದ ಲಾರಿಯಲ್ಲಿದ್ದ 505 ಲೀಟರ್ ಅಕ್ರಮ ಗೋವಾ ಮದ್ಯವನ್ನು ಅಬಕಾರಿ ಅಧಿಕಾರಿಗಳು ಸೋಮವಾರ ತಡರಾತ್ರಿ ಕಾರವಾರ ಮಾಜಾಳಿ ತನಿಖಾ ಠಾಣೆಯಲ್ಲಿ ವಶಕ್ಕೆ ಪಡೆದಿದ್ದಾರೆ. 9.13 ಲಕ್ಷ ರೂ. ಮೌಲ್ಯದ ಮದ್ಯ, 15 ಲಕ್ಷದ 10 ಚಕ್ರದ ಲಾರಿ, 90 ಸಾವಿರ ರೂ. ಮೌಲ್ಯದ ಪ್ಲಾಸ್ಟಿಕ್ ಟ್ರೇಗಳನ್ನು ವಶಕ್ಕೆ ಪಡೆಯಲಾಗಿದೆ. ಲಾರಿ ಚಾಲಕ ಆಂಧ್ರಪ್ರದೇಶ ಗೋದಾವರಿ ಮೂಲದ ಸೂರ್ಯನಾರಾಯಣಮೂರ್ತಿ ಎಂ. ಎಂಬಾತನನ್ನು ಬಂಧಿಸಲಾಗಿದೆ. ಮಾಜಾಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net