

ಕೊಳ್ಳೇಗಾಲ: ತಾಲೂಕಿನ ಕೊಂಗರಹಳ್ಳಿ ಗ್ರಾಮದಲ್ಲಿ ಫೆ.9 ಮತ್ತು 10ರಂದು ಶ್ರೀಗುರುಮಲ್ಲೇಶ್ವರ ದಾಸೋಹ ಮಠದ ನೂತನ ಕಟ್ಟಡ ಉದ್ಘಾಟನೆ ಹಾಗೂ ಲಿಂಗೈಕ್ಯ ಶ್ರೀಬಸಪ್ಪದೇವರು ಸ್ವಾಮೀಜಿ ಗದ್ದುಗೆಗೆ ಬಸವೇಶ್ವರಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ವಿವಿಧ ಮಠಗಳ ಮಠಾಧ್ಯಕ್ಷರ ಉಪಸ್ಥಿತಿಯಲ್ಲಿ ನೆರವೇರಲಿದೆ.
ದೇವನೂರು ಶ್ರೀಮನ್ನಿರಂಜನ ಗುರುಮಲ್ಲೇಶ್ವರ ತ್ರಿವಿಧ ದಾಸೋಹ ಮಹಾ ಸಂಸ್ಥಾನ ಮಠದ ಶ್ರೀಮಹಾಂತ ಸ್ವಾಮೀಜಿ ಕೃಪಾಶೀರ್ವಾದೊಂದಿಗೆ ಕಾಮಗೆರೆ ಪಟ್ಟದಮಠದ ಶ್ರೀಮುಮ್ಮಡಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಾಮಗೆರೆ ಭಿಕ್ಷದ ಮಠದ ಶ್ರೀಪ್ರಕಾಶ ಸ್ವಾಮೀಜಿ ನೇತೃತ್ವದಲ್ಲಿ ಫೆ.9ರಂದು ಬೆಳಗ್ಗೆ 10 ಗಂಟೆಗೆ ಷಟ್ಸ್ಥಲ ಧ್ವಜಾರೋಹಣ ನಡೆಯಲಿದೆ. ಸಂಜೆ 4 ಗಂಟೆಗೆ ಗ್ರಾಮದ ಬೀದಿಗಳಲ್ಲಿ ಶ್ರೀಬಸವೇಶ್ವರ ಮೂರ್ತಿಯ ಮೆರವಣಿಗೆ, 6.30ಕ್ಕೆ ನೂತನ ಆಲಯದ ದ್ವಾರ ಪ್ರವೇಶ, ಅನುಜ್ಞಾ ಗಂಗಾಪೂಜೆ, ಗೋಪೂಜೆ, ಭಗವತ್ಪಾರ್ಥನೆ. 7 ಗಂಟೆಗೆ ಗಣಪತಿ ಪೂಜೆ, ಪುಣ್ಯಾಹ, ಪ್ರವೇಶ ಬಲಿ ಮಂಡಲ, ವಾಸ್ತು ಮಂಡಲ, ರಾಕ್ಷಜ್ಞ ಮಂಡಲ ಸಹಿತ ಕಳಸಪೂಜೆ ಹಾಗೂ ಹೋಮ ದೇವಾಲಯದ ಶುದ್ಧಿ ಪ್ರಕಾರ ಶುದ್ಧಿ, ದಿಗ್ಬಲಿ ಹಾಗೂ ಶ್ರೀಬಸವೇಶ್ವರ ಮತ್ತು ಶಿಖರ ಕಳಸ ದೇವತೆ, ಪ್ರತ್ಯಾದಿ ದೇವತೆ, ಪ್ರಧಾನ ಘಟ ಕುಂಭ ಸ್ಥಾಪನೆ, ಪರಿವಾರ ದೇವತೆಗಳ ಪೂಜೆ, ಲಘು ಪೂರ್ಣಾಹುತಿ, ಲಘು ಮಂಗಳಾರತಿ. 10 ಗಂಟೆಗೆ ಶ್ರೀಬಸವೇಶ್ವರ ವಿಗ್ರಹಕ್ಕೆ ರುದ್ರ ಪಾರಾಯಣದೊಂದಿಗೆ ಜಲ, ಕ್ಷೀರಾಭಿಷೇಕದೊಂದಿಗೆ ಆದಿವಾಸಗಳು, ವಿಗ್ರಹಕ್ಕೆ ಮಂತ್ರ ತತ್ವಾದಿ ಧನ, ಧಾನ್ಯ, ಪುಷ್ಪ-ಪತ್ರೆ ಶಯ್ಯನಾದಿವಾಸ ಶ್ರದ್ಧಾಭಕ್ತಿಯಿಂದ ನೆರವೇರಲಿದೆ.
ಫೆ.10 ಬೆಳಗ್ಗೆ 4ಗಂಟೆಗೆ ಭಗವತ್ ಪ್ರಾರ್ಥನೆ ವೇದ ಪಾರಾಯಣದೊಂದಿಗೆ ಉತ್ತಿಷ್ಟ ಸೇವೆ, ಪೀಠಸಂಸ್ಕಾರ, ಯಂತ್ರ ನವರತ್ನ ಪಂಚಲೋಹ ಸಮೇತ ಅಷ್ಟಬಂಧನ ಪೂರ್ವಕ ಶ್ರೀಸ್ವಾಮಿಗೆ ಪ್ರಾಣ ಪ್ರತಿಷ್ಠಾಪನೆ ಹಾಗೂ ಶಿಖರ ಕಳಸ ಸ್ಥಾಪನೆ. 5 ಗಂಟೆಗೆ ಶ್ರೀಬಸವೇಶ್ವರಸ್ವಾಮಿಗೆ ಅಭಿಷೇಕ ಸೇವೆ, ಕಳಶಾರಾಧನೆ, ಪ್ರಧಾನ ದೇವತೆಗಳಿಗೆ ಪರಿವಾರ ಸಮೇತ ಪ್ರಧಾನ ಹೋಮ ಪ್ರಾಣ ಪ್ರತಿಷ್ಠಾಪನೆ, ನಾಡಿ ಸಂಧಾನ ಪೂರ್ವಕ ಜಯಾದಿ ಶಾಂತಿ, ಪ್ರಾಯಶ್ಚಿತ್ತ ಹೋಮ ನೆರವೇರುವುದು. 9 ಗಂಟೆಗೆ ಹೋಮದ ಮಹಾಪೂರ್ಣಾಹುತಿ, ನೇತ್ರೋನ್ಮಿಲನ, ಶಿಖರ ಕುಂಭಾಭಿಷೇಕ, ಗದ್ದುಗೆಗೆ ಅಲಂಕಾರ, ಕದಳಿ ಛೇದನ, ಕೂಷ್ಮಾಂಡ,ಅನ್ನಬಲಿ, ಸೂರ್ಯಬಿಂಬ ಸ್ಪರ್ಶ, ಅಗ್ನಿದರ್ಶನ, ಪುಷ್ಪಾಂಜಲಿ ಸೇವೆ ಹಾಗೂ ಮಹಾ ಮಂಗಳಾರತಿ ನೆರವೇರಲಿದೆ. 10 ಗಂಟೆಗೆ ದೇವನೂರು ಮಠದ ಶ್ರೀಮಹಾಂತಸ್ವಾಮೀಜಿಗಳ ಪಾದಪೂಜೆ ನಡೆಯಲಿದೆ.
ಫೆ.11ರಂದು ಬೆಳಗ್ಗೆ 10 ಗಂಟೆಗೆ ಶ್ರೀಕಾರ್ಯಸ್ವಾಮಿ ಮಠ ಸಂಗಮ ಕ್ಷೇತ್ರದಿಂದ ದಯಮಾಡಿಸುವ ಶ್ರೀವರಗುರು ವೀರಭದ್ರೇಶ್ವರರ ಪಲ್ಲಕ್ಕಿ ಉತ್ಸವ, ವೀರಗಾಸೆ, ಮಂಗಳವಾದ್ಯಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಭಕ್ತಿ-ಭಾವದಿಂದ ನೆರವೇರಲಿದೆ.
ಸಮಾರಂಭದ ಉಪಸ್ಥಿತಿಯನ್ನು ಕನಕಪುರ ದೇಗುಲ ಮಠದ ಶ್ರೀಚೆನ್ನಬಸವ ಸ್ವಾಮೀಜಿ, ಮೈಸೂರು ಕುದೇರು ಮಠದ ಶ್ರೀಗುರುಶಾಂತಸ್ವಾಮೀಜಿ, ಸಾಲೂರು ಬೃಹನ್ಮಠದ ಶ್ರೀಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಗೌಡಹಳ್ಳಿ ವಿರಕ್ತ ಮಠದ ಶ್ರೀಮರಿತೋಂಟದಾರ್ಯ ಸ್ವಾಮೀಜಿ, ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮೀಜಿ, ಚಾಮರಾಜನಗರ ವಿರಕ್ತ ಮಠದ ಶ್ರೀಚನ್ನಬಸವಸ್ವಾಮೀಜಿ, ಮರಿಯಾಲ ಮಠದ ಶ್ರೀಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ, ಹೊಂಡರಬಾಳು ಶಂಖಿನಮಠದ ಶ್ರೀನೀಲಕಂಠಶಿವಾಚಾರ್ಯ ಸ್ವಾಮೀಜಿ, ಅರಕಲವಾಡಿ ಪಟ್ಟದ ಮಠದ ಶ್ರೀಬಸವಣ್ಣ ಸ್ವಾಮೀಜಿ, ಗುಂಡೇಗಾಲ ಪಟ್ಟದ ಮಠದ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ, ರಾಮಾಪುರ ಪಟ್ಟದಮಠದ ಶ್ರೀಬಸವಣ್ಣ ಸ್ವಾಮೀಜಿ, ಅಜ್ಜೀಪುರ ಪಟ್ಟದ ಮಠದ ಶ್ರೀನಂದೀಶ ಶಿವಾಚಾರ್ಯ ಸ್ವಾಮೀಜಿ, ಬಂಡಹಳ್ಳಿ ದೊಡ್ಡಮಠದ ಡಾ.ಫಲಹಾರ ಪ್ರಭುದೇವಸ್ವಾಮೀಜಿ, ಕುಂತೂರು ವೀರಸಿಂಹಾಸನ ಮಠದ ಶ್ರೀಶಿವಪ್ರಭುಸ್ವಾಮೀಜಿ, ಕೆಸ್ತೂರು ಪಟ್ಟದ ಮಠದ ಶ್ರೀತೋಂಟದಾರ್ಯ ಸ್ವಾಮೀಜಿ, ಚಿಲಕವಾಡಿ ಪಟ್ಟದ ಮಠದ ಶ್ರೀಇಮ್ಮಡಿ ಗುರುಲಿಂಗ ಸ್ವಾಮೀಜಿ, ಚಿಕ್ಕಿಂದುವಾಡಿ ಮಠದ ಶ್ರೀಬಾಲಷಡಕ್ಷರಿ ಸ್ವಾಮೀಜಿ, ಹೊಂಡರಬಾಳು ಶಂಕಿನಮಠದ ಕಿರಿಯ ಶ್ರೀಗಳಾದ ಶ್ರೀಪ್ರಸನ್ನ ಮಲ್ಲಿಕಾರ್ಜುನ ಸ್ವಾಮೀಜಿ, ಆಲಹಳ್ಳಿ ಮಠದ ಶ್ರೀಇಮ್ಮಡಿ ಬಸಪ್ಪಸ್ವಾಮೀಜಿ, ಚಿಲಕವಾಡಿ ಕರಡಿ ಮಠದ ಶ್ರೀಬಾಲಷಡಕ್ಷರಿ ಸ್ವಾಮೀಜಿ, ಸಂಗಮ ಕಾರ್ಯಸ್ವಾಮಿ ಮಠದ ಶ್ರೀಮಹೇಶ್ವರ ಸ್ವಾಮೀಜಿ ಸೇರಿದಂತೆ ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ಎಲ್ಲ ಭಿಕ್ಷದ ಮಠಾಧ್ಯಕ್ಷರು ವಹಿಸಲಿದ್ದಾರೆ ಎಂದು ಕೊಂಗರಹಳ್ಳಿ ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.