

ಬೆಂಗಳೂರು: ನಿಟ್ಟೂರು ಮತ್ತು ಸಂಪಿಗೆ ರೋಡ್ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್-64ರ ರಸ್ತೆ ಕೆಳಸೇತುವೆಗೆ ತಾತ್ಕಾಲಿಕ ಗರ್ಡರ್ ಅಳವಡಿಸುವ ಹಾಗೂ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಸಲುವಾಗಿ ಆಗಸ್ಟ್ 8 ಮತ್ತು 15 ರಂದು 8 ರೈಲುಗಳ ಸಂಚಾರ ರದ್ದಾಗಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ತುಮಕೂರು-ಚಾಮರಾಜನಗರ ಡೇಲಿ ಪ್ಯಾಸೆಂಜರ್ ಸ್ಪೆಷಲ್, ಚಾಮರಾಜನಗರ-ಮೈಸೂರು ಡೇ ಪ್ಯಾಸೆಂಜರ್ ಸ್ಪೆಷಲ್, ಚಿಕ್ಕಮಗಳೂರು-ಯಶವಂತಪುರ ಡೇಲಿ ಎಕ್ಸ್ಪ್ರೆಸ್, ಯಶವಂತಪುರ-ಚಿಕ್ಕಮಗಳೂರು ಡೇಲಿ ಎಕ್ಸ್ಪ್ರೆಸ್, ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ಸ್ಪೆಷಲ್, ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ಸ್ಪೆಷಲ್, ಯಶವಂತಪುರ-ಶಿವಮೊಗ್ಗ ಟೌನ್ ಇಂಟರ್ಸಿಟಿ, ಶಿವಮೊಗ್ಗ ಟೌನ್-ಯಶವಂತಪುರ ಇಂಟರ್ಸಿಟಿ ರೈಲುಗಳು ರದ್ದಾಗಲಿವೆ.
ಆ.8 ಮತ್ತು 15ರಂದು ಯಶವಂತಪುರ-ವಾಸ್ಕೋಡಗಾಮಾ ಡೇಲಿ ಎಕ್ಸ್ಪ್ರೆಸ್ ರೈಲು ಯಶವಂತಪುರದಿಂದ 60 ನಿಮಿಷ ತಡವಾಗಿ ಹೊರಡಲಿದೆ. 14ರಂದು ತುಮಕೂರು& ಶಿವಮೊಗ್ಗ ಟೌನ್ ಮೆಮು ಸ್ಪೆಷಲ್ ರೈಲು ತುಮಕೂರಿನಿಂದ 85 ನಿಮಿಷ ತಡವಾಗಿ ಹೊರಡಲಿದೆ ಎಂದು ಮಾಹಿತಿ ನೀಡಿದೆ.