

ಗೌರಿಬಿದನೂರು: ತಾಲೂಕಿನ ಮಿಣುಕನಗುರ್ಕಿ ಕ್ರಾಸ್ ಸಮೀಪ ವಾಹನಗಳಲ್ಲಿ ಜೋಳದ ಬೆಂಡಿನ ಮೂಟೆ ಹಾಗೂ ಟೊಮ್ಯಾಟೊ ಬಾಕ್ಸ್‌ಗಳ ಮಧ್ಯೆ ಅಕ್ರಮವಾಗಿ ಸಾಗಿಸುತ್ತಿದ್ದ 16 ಲಕ್ಷ ರೂ. ಮೌಲ್ಯದ 8 ಟನ್ ಗೋಮಾಂಸವನ್ನು ಮಂಚೇನಹಳ್ಳಿ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಶಿವಾಜಿನಗರದ ರನ್ ಮತ್ತು ನೂರುಲ್ಲಾ ಶರೀಫ್, ಆಂಧ್ರದ ಹಿಂದೂಪುರ ಮೂಲದ ಆರ್ೀ, ಅಸೀಂ ಬಾಪಾ ಬಂಧಿತರು. ಆಂಧ್ರಪ್ರದೇಶದ ಹಿಂದೂಪುರದಿಂದ ಬೆಂಗಳೂರಿನ ಶಿವಾಜಿನಗರಕ್ಕೆ ಗೋಮಾಂಸದ ಸಾಗಿಸುತ್ತಿದ್ದ ಬಗ್ಗೆ ದೊರೆತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಮೂರು ಬೊಲೆರೊ ವಾಹನ ಪರಿಶೀಲಿಸಿದಾಗ 8 ಟನ್ ಗೋಮಾಂಸ ಪತ್ತೆಯಾಗಿದೆ. ಮಂಚೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.