8 ಮಂದಿ ದರೋಡೆಕೋರ ಬಂಧನ

Published on

ಚನ್ನಪಟ್ಟಣ: ತಾಲೂಕಿನ ಅಕ್ಕೂರು ಠಾಣೆಯ ಪೊಲೀಸರು 8 ಮಂದಿ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಜಯ್, ಹೇಮಂತ್, ಯೋಗೇಶ್, ನಾಗರಾಜು, ನರಸಿಂಹ, ವಿಕಾಸ್, ಚಿರಂಜೀವಿ, ಪ್ರವೀಣ ಬಂಧಿತರು.

ಕಳೆದ ಮಾರ್ಚ್ 23 ರಂದು ಅಕ್ಕೂರು ಠಾಣೆ ವ್ಯಾಪ್ತಿಯ ನೆಲಮಾಕನಹಳ್ಳಿಯಲ್ಲಿ ಅಪರಿಚಿತರಯ ಕಾರು ಮತ್ತು ಸ್ಕೂಟರ್‌ಗಳಲ್ಲಿ ಬಂದು ಮಾರಕಾಸ್ತ್ರ ತೋರಿಸಿ ಹಲ್ಲೆ ಮಾಡಿ 20 ನಗದು ಾಗೂ ಮೊಬೈಲ್ ಕಸಿದುಕೊಂಡು ಹೋಗಿದ್ದರು. ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ ಆರೋಪಿಗಳ ಪತ್ತೆಗಾಗಿ ಬಲೆಬೀಸಿತ್ತು. ವಿವಿಧಡೆ ಮಾಹಿತಿ ಸಂಗ್ರಹಿಸಿ, ಈ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ 8 ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವರಿಂದ ವಿವಿಧ ಮಾದರಿಯ ಮಾರಕಾಸ್ತ್ರಗಳು, 5 ಮೊಬೈಲ್, 1 ಕಾರು, 4 ದ್ವಿಚಕ್ರ ವಾಹನಗಳು, 15 ಸಾವಿರ ನಗದು ಹಾಗೂ 40 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಹೆಚ್ಚಿನ ವಿಚಾರಣೆ ನಡೆಸಿದ್ದಾಗ ಈ ತಂಡದ ನಾಲ್ಕು ಪ್ರಕರಣಗಳು ಬಯಲಾಗಿವೆ. ಈ ತಂಡ ಅಕ್ಕೂರು, ಚನ್ನಪಟ್ಟಣ ಹಾಗೂ ಕುಣಿಗಲ್ ವ್ಯಾಪ್ತಿಯಲ್ಲಿ ದರೋಡೆ ನಡೆಸಿದ್ದು, ಒಂದನೇ ಆರೋಪಿ ಸಂಜಯ್ ಎಂಬಾತನ ಮೇಲೆ ಬರೋಬರಿ 21 ಪ್ರಕರಣಗಳಿದ್ದು, ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಎರಡನೇ ಆರೋಪಿ ಹೇಮಂತ್ ಹಾಗೂ ಮೂರನೇ ಆರೋಪಿ ಯೋಗೇಶ್ ಮೇಲೆ ಕೊಲೆ ಪ್ರಕರಣಗಳಿದ್ದು, ಉಳಿದವರ ವಿರುದ್ಧ ಪ್ರಕರಣಗಳಿವೆ. ಚನ್ನಪಟ್ಟಣ ಗ್ರಾಮಾಂತರ ವೃತ್ತ ಹಾಗೂ ಅಕ್ಕೂರು ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಎಸ್‌ಪಿ ಶ್ರೀನಿವಾಸ ಗೌಡ ಹಾಗೂ ಡಿವೈಎಸ್ಪಿ ಕೆ.ಸಿ.ಗಿರಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net