ಬಿಡದಿ: ನಿಂಗೇಗೌಡನದೊಡ್ಡಿ ಗ್ರಾಮ ಹೊರವಲಯದ ಜೂಜು ಅಡ್ಡೆ ಮೇಲೆ ಭಾನುವಾರ ಬಿಡದಿ ಪೊಲೀಸರು ದಾಳಿ ನಡೆಸಿ, 8 ಜನರನ್ನು ಬಂಧಿಸಿ, 7,200 ರೂ. ನಗದು ವಶಕ್ಕೆ ಪಡೆದಿದ್ದಾರೆ..ಗ್ರಾಮದ ಹೊರ ವಲಯದ ರ್ನಿಜನ ಪ್ರದೇಶದಲ್ಲಿ ಕೆಲವರು ಜೂಜಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿದ್ದಾರೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.