

Sirsi 71ನೇ ಸಹಕಾರಿ ಸಪ್ತಾಹದ ಅಂಗವಾಗಿ ನಗರದ ತಾಲೂಕು ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ (ಟಿಎಂಎಸ್)ನಲ್ಲಿ ನಿಷ್ಟಾವಂತ ಸದಸ್ಯರು, ಹಾಗೂ ವಿಶೇಷ ಸಾಧಕರಿಗೆ ಶುಕ್ರವಾರ ಸನ್ಮಾನಿಸಲಾಯಿತು.
Sirsi ಟಿಎಂಎಸ್ ಸದಸ್ಯರಾದ ರಾಮಚಂದ್ರ ಹೆಗಡೆ ನೈಗಾರ, ವಿ.ಆರ್. ಹೆಗಡೆ ಮಣ್ಮನೆ, ತಿಮ್ಮಪ್ಪ ಹೆಗಡೆ ಹುಳಗೋಳ, ಶಿವರಾಮ ಭಟ್ ದೊಡ್ಮನೆ, ವಿಘ್ನೇಶ್ವರ ಹೆಗಡೆ ಗೊಡ್ವೆಮನೆ, ಅನಂತ ಹೆಗಡೆ ಮಾವಿನಕೊಪ್ಪ, ಟಿ.ಕೆ. ಹೆಗಡೆ ಹಾರೇಹುಲೇಕಲ್, ಶ್ರೀಪಾದ ಹೆಗಡೆ ಗುಮ್ಮನಮನೆ, ಗಣಪತಿ ಹೆಗಡೆ ಜಾಗನಳ್ಳಿ, ನರಸಿಂಹ ಹೆಗಡೆ ಬರೂರು, ರಘುಪತಿ ಹೆಗಡೆ ಪಡಗೇರಿ, ಗಣಪತಿ ಭಟ್ ಗೋಪಿಮನೆ, ಸೋಮಯ್ಯ ನಾಯ್ಕ ಮಾವಿನಕೊಪ್ಪ, ಧರ್ಮಾ ನಾಯ್ಕ ಬಂಕನಾಳ, ಗುರುನಾಥ ಭಟ್ ಬೆಂಗಳೆ, ಶ್ರೀಪಾದ ಹೆಗಡೆ ಬಕ್ಕೆಮನೆ ಅವರನ್ನು ಸನ್ಮಾನಿಸಲಾಯಿತು. ಅದೇ ರೀತಿ Sirsi ಟಿಎಂಎಸ್ ಖರೀದಿದಾರರಾದ ಸುಬ್ರಹ್ಮಣ್ಯ ಹೆಗಡೆ ಕರಡಿಗೇಮನೆ, ಮಹಮ್ಮದ್ ರಫೀಖ್ ಬೇಸಾನಿಯಾ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶವ ಹೆಗಡೆ ಕೊಳಗಿ, ಮನು ಹೆಗಡೆ ಹಾಲಳ್ಳ, ಅಮರನಾಥ ಹೆಗಡೆ ಕೊಟ್ಟೆಗದ್ದೆ, ಅಕ್ಷಯ ಹೆಗಡೆ ಚಿಪಗಿ ಅವರನ್ನು ಸನ್ಮಾನಿಸಲಾಯಿತು.
Sirsi ಟಿಎಂಎಸ್ ನಲ್ಲಿ ಆಯೋಜಿಸಿದ್ದ ಉದ್ಘಾಟಿಸಿ ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವಿಷ್ಣು ಎನ್. ಭಟ್ ಅಳ್ಳಂಕಿ ಮಾತನಾಡಿ, ಸಹಕಾರಿ ಚಳುವಳಿ ಪ್ರಬಲಗೊಳಿಸುವುದು ಸಪ್ತಾಹದ ಉದ್ದೇಶ. ದೇಶದ ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಹಕಾರಿ ಕ್ಷೇತ್ರ ಮಹತ್ತರ ಪಾತ್ರ ವಹಿಸಿದೆ. ಸ್ವಾತಂತ್ರಾನಂತರ ಜವಾಹರಲಾಲ ನೆಹರೂ ಸಹಕಾರಿ ಕ್ಷೇತ್ರಕ್ಕೆ ಒತ್ತು ನೀಡಿ, ಸಹಕಾರಿ ಕ್ಷೇತ್ರಕ್ಕೆ ಹಣಕಾಸಿನ ವ್ಯವಸ್ಥೆ ಒದಗಿಸಿಕೊಟ್ಟರು. ಉತ್ತಮ ಸಹಕಾರಿ ಸಂಘಗಳನ್ನು ಇತರರಿಗೆ ಮಾದರಿಯಾಗಿ ತಿಳಿಸುವ ಜೊತೆ ಕಷ್ಟ ಎದುರಿಸುತ್ತಿರುವ ಸಂಘಗಳನ್ನೂ ಮೇಲೆತ್ತುವ ಬಗ್ಗೆ ಸಹಕಾರಿ ಸಪ್ತಾಹದ ಮೂಲಕ ನಾವು ಯೋಜಿಸಬೇಕಿದೆ. ಉತ್ತರ ಕನ್ನಡದಲ್ಲಿ ಸಹಕಾರಿ ಕ್ಷೇತ್ರ ಪ್ರಬಲವಾಗಿದೆ. ನಮ್ಮ ಹಿರಿಯ ಸಹಕಾರಿಗಳ ಕೊಡುಗೆ ಸಹ ಅದಮ್ಯವಾಗಿದೆ ಎಂದರು.
ಸಿದ್ದಾಪುರ ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಮಾತನಾಡಿ, ಸಂಸ್ಥೆಗೆ ಬದ್ಧತೆ, ಆರ್ಥಿಕ ಶಿಸ್ತು, ಸದಸ್ಯರೊಂದಿಗೆ ಸಂಭಂಧ ಉತ್ತಮವಾಗಿದ್ದರೆ ಸಂಸ್ಥೆಯು ಅಭಿವೃದ್ಧಿಯ ನಾಗಾಲೋಟದ ವೇಗದಲ್ಲಿ ಆಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆಯ ಅಡಿಯಲ್ಲಿ ಸಹಕಾರಿ ಸಂಘ ಭದ್ರವಾಗಿದ್ದಕ್ಕಿಂತ ಇಲ್ಲಿಯ ಜನತೆಗೆ ಸಹಕಾರಿ ಕ್ಷೇತ್ರ ರಕ್ತಗತವಾಗಿ ಪ್ರಬಲವಾಗಿದೆ. ಸಹಕಾರಿ ವ್ಯವಸ್ಥೆ ಅಡಿಯಲ್ಲಿ ಉದ್ಯಮಗಳ ಮೂಲಕ ಯಶಸ್ಸು ಕಂಡವರು ನಮ್ಮ ಜಿಲ್ಲೆಯಲ್ಲಿ ಮಾತ್ರ ಕಾಣಸಿಗಲು ಸಾಧ್ಯ. ಸಹಕಾರಿ ಕ್ಷೇತ್ರದ ಪಾತ್ರ ಕಾಲ ಕಾಲಕ್ಕೆ ಸರಿಯಾಗಿ ಬದಲಾಗುತ್ತಿದೆ, ಬದಲಾಗಬೇಕು. ಈ ವ್ಯಸ್ಥೆಯ ಬುನಾದಿ ಗಟ್ಟಿಯಾಗಿದ್ದರೆ ಸಮಾಜದಲ್ಲಿ ಆಗಾಗ ಬರುವ ತೊಡಕು ಎದುರಿಸುವ ಸಾಮರ್ಥ್ಯ ತಂದುಕೊಡುತ್ತದೆ. ಅಡಕೆ ದರ ಕುಸಿತವಾದಾಗ ಸಹಕಾರಿ ಸಂಘಗಳೇ ಸ್ವತಃ ರೈತರ ಅಡಕೆ ಖರೀದಿಸಿ ಮಾರುಕಟ್ಟೆ ಸ್ಥಿರತೆಗೆ ಶ್ರಮಿಸುತ್ತಿರುವುದು ಇದಕ್ಕೊಂದು ಉದಾಹರಣೆಯಾಗಿದೆ ಎಂದರು. ಇತ್ತೀಚಿನ ವರ್ಷಗಳಲ್ಲಿ ಅಡಕೆ ಬೆಳೆಯುವುದೇ ಸ್ಪರ್ಧೆ ಎಂಬಂತೆ ಆಗಿದೆ. ರೈತರು ಚಿಕ್ಕ ಹಿಡುವಳಿದಾರರಾಗುತ್ತಿದ್ದು, ವಿಂಗಡಿತ ಕೃಷಿ ಭೂಮಿ ಜಾಸ್ತಿಯಾಗುತ್ತಿದೆ. ಇನ್ನೊಂದೆಡೆ ಅಡಕೆಯ ಉತ್ಪಾದನಾ ವೆಚ್ಛ ಸಹ ಜಾಸ್ತಿ ಆಗಿದೆ. ಸಹಕಾರಿ ಸಂಘಗಳ ಅಡಿಯಲ್ಲಿಯೇ ಅಡಕೆ ಕೃಷಿಯನ್ನೂ ಅಳವಡಿಸಿಕೊಳ್ಳುವ ಸಾಧ್ಯತೆಯೂ ಮುಂದಿನ ದಿನಗಳಲ್ಲಿ ದಟ್ಟವಾಗಿದ್ದು, ಈ ನಿಟ್ಟಿನಲ್ಲಿ ಸಹಕಾರಿ ಧುರೀಣರು ಇಂದೇ ಯೋಚಿಸಬೇಕಾದ ಅಗತ್ಯತೆ ಇದೆ. ಸಾಮುಹಿಕ ಕೃಷಿಯನ್ನು ಸಹಕಾರಿ ವ್ಯವಸ್ಥೆ ಅಡಿ ಮಾಡುವ ಅನಿವಾರ್ಯ ಸಂದರ್ಭ ಈಗ ಬಂದಿದೆ. ಉತ್ಪಾದನಾ ವೆಚ್ಚ ತಗ್ಗಿಸಿ, ಲಾಭ ಹೆಚ್ಚಿಸುವ ಅಗತ್ಯತೆ ಇದೆ ಎಂದರು. Sirsi ಟಿಎಂಎಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೋಳ ಮಾತನಾಡಿ, ಸಹಕಾರ ಕೇತ್ರ ಉಳಿಯಬೇಕು ಎಂದರೆ ಯುವಕರು ಬರಬೇಕು. ತರಬೇತಿ ಹೊಂದಿದವರು ಹೆಚ್ಚು ಪಾಲ್ಗೊಳ್ಳಬೇಕು. ತರಬೇತಿ ಕೊರತೆಯಿಂದ ಅಪ್ರಾಪ್ತ ನೌಕರರು ಜಾಸ್ತಿ ಆಗುತ್ತಿದ್ದಾರೆ. ಇದು ಸಂಸ್ಥೆಗೆ ಉತ್ತಮವಲ್ಲ ಎಂದರು.
Sirsi ಟಿಎಂಎಸ್ ಸಂಸ್ಥೆಯ ಅಧ್ಯಕ್ಷ ಜಿ. ಟಿ. ಹೆಗಡೆ ತಟ್ಟಿಸರ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕ ವಿನಯ ಹೆಗಡೆ ಮಂಡೆಮನೆ, ಗಿರಿಧರ ಕಬ್ನಳ್ಳಿ ಇತರರಿದ್ದರು.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನದ ಪ್ರಯುಕ್ತ ಸಹಕಾರ ಇಲಾಖೆಯಿಂದ ನವೆಂಬರ್ 14 ರಿಂದ ನವೆಂಬರ್ 20 ರವರೆಗೆ ನಡೆಯಲಿದೆ. ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಒಂದೊಂದು ದಿನ ಕಾರ್ಯಕ್ರಮಗಳು ನಡೆಯಲಿವೆ.
ರಾಜ್ಯ ಸಹಕಾರ ಮಹಾಮಂಡಳ, ಅಪೆಕ್ಸ್ ಸಹಕಾರ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ (ನ.14) ಬೆಳಗ್ಗೆ 11ಕ್ಕೆ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.15ಕ್ಕೆ ಚಿತ್ರದುರ್ಗ, 16ಕ್ಕೆ ಮಂಗಳೂರು, 17ಕ್ಕೆ ಬಾಗಲಕೋಟಿ, 18ಕ್ಕೆ ಬೀದರ್, 19ಕ್ಕೆ ಚಿಕ್ಕಮಗಳೂರಿನಲ್ಲಿ ಕಾರ್ಯಕ್ರಮ ಇದ್ದರೆ ಹಾಗೂ 20ರಂದು ಬೆಳಗಾವಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಬಾಗಲಕೋಟಿಯಲ್ಲಿ ನಡೆಯುವ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಸಹಕಾರ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ 'ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ ದೇವೇಗೌಡ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
'ವಿಕಸಿತ ಭಾರತ ನಿಮಾರ್ಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ' ಧೈಯದೊಂದಿಗೆ ಪ್ರತಿನಿತ್ಯ ಸಹಕಾರ ಕ್ಷೇತ್ರದ ಕುರಿತು ಉಪನ್ಯಾಸ, ಚಿಂತನ&ಮಂಥನ ನಡೆಯಲಿದೆ ಸಹಕಾರ ಚಳವಳಿಯ ಸಾಧನೆ& ವೈಲ್ಯ ಕುರಿತು ಜನರಿಗೆ ಮನವರಿಕೆ ಮಾಡಲಾಗುತ್ತದೆ ಎಲ್ಲ ಜಿಲ್ಲೆ, ತಾಲೂಕು, ಗ್ರಾಮಗಳಲ್ಲೂ ಕಾರ್ಯಕ್ರಮಗಳಿವೆ ಸಹಕಾರ ಸಂಸ್ಥೆಗಳ ಕಟ್ಟಡಗಳ ಮೇಲೆ ಸಹಕಾರಿ ಧ್ವಜಾರೋಹಣ ನೆರವೇರಿಸಲಾಗುವುದು ಸಪ್ತಾಹದ 7 ದಿನಗಳಲ್ಲೂ ಸಚಿವರು, ಆಯಾ ಭಾಗದ ಶಾಸಕರು, ಸಹಕಾರಿ ಮುಖಂಡರು ಸೇರಿ ಸಹಸ್ರಾರು ಜನರು ಭಾಗಿಯಾಗಲಿದ್ದಾರೆ ಎಂದು ವಿವರಿಸಿದರು. ಮಂಡಳಿ ಎಂಡಿ ನವೀನ್, ಮಹಾಮಂಡಳ ನಿರ್ದೇಶಕ ಡಾ ಶೆಖರಗೌಡ ಮಾಲಿ ಪಾಟೀಲ್, ಬಿ.ಸಿ.ಲೋಕಪ್ಪಗೌಡ, ಎಚ್.ಎನ್. ಅಶೋಕ, ಎ.ಸಿ.ನಾಗರಾಜು, ನಾಗರತ್ನ, ಆರ್ ರಾಮರೆಡ್ಡಿ ಇದ್ದರು. 31 ಕೋಟಿ ಸದಸ್ಯರು: ರಾಷ್ಟ್ರದಲ್ಲಿ 8.5 ಲಕ್ಷ ಸಹಕಾರ ಸಂಸ್ಥೆಗಳಿಂದ 31 ಕೋಟಿ ಸದಸ್ಯರಿದ್ದಾರೆ ರಾಜ್ಯದಲ್ಲಿ ವಿವಿಧ ಬಗೆಯ 47 ಸಾವಿರ ಸಹಕಾರ ಸಂಸ್ಥೆಗಳಿದ್ದು, 2 ಕೋಟಿ 70 ಲಕ್ಷ ಸದಸ್ಯರಿದ್ದಾರೆ. ಹೈನುಗಾರಿಕೆ, ಕೃಷಿಪತ್ತಿನ ಸಹಕಾರ ವ್ಯವಸ್ಥೆ, ಪಟ್ಟಣ ಸಹಕಾರ ಬ್ಯಾಂಕ್‌ಗಳು, ಕೃಷಿಯೇತರ ಪತ್ತಿನ ಸಹಕಾರ ಸಂಗಳು ಅತ್ಯುತ್ತಮ ಸೇವೆ ಸಲ್ಲಿಸುತ್ತಿವೆ 36 ಲಕ್ಷ ರೈತರಿಗೆ ಸಾಲ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ದೇವೇಗೌಡ ತಿಳಿಸಿದರು. 2023-24ರಲ್ಲಿ ನಬಾರ್ಡ್‌ನಿಂದ ವಿವಿಧ ಸಹಕಾರಿ ಬ್ಯಾಂಕ್‌ಗಳಿಗೆ ಸಬ್ಸಿಡಿ ಆಧಾರದಲ್ಲಿ 5,400 ಕೋಟಿ ರೂ. ಸಾಲ ನೀಡಲಾಗಿತ್ತು. ಪ್ರಸಕ್ತ ವರ್ಷದಲ್ಲಿ 2,300 ಕೋಟಿ ರೂ. ಮಾತ್ರ ನೀಡಲಾಗಿದೆ. ಒಟ್ಟಾರೆ ಸಾಲದ ಮಿತಿಯಲ್ಲಿ ಏಕಾಏಕಿ ಶೇ.58 ಕಡಿತಗೊಳಿಸಲಾಗಿದೆ. ಇದರಿಂದಾಗಿ ರೈತರ ಜೀವನಾಡಿಯಾದ ಸಹಕಾರಿ ಬ್ಯಾಂಕ್‌ಗಳು ಉಳಿಯಬೇಕೆಂದರೆ ನಬಾರ್ಡ್ ಪಾತ್ರ ಪ್ರಮುಖವಾದದ್ದು. ಈ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಬಗೆಹರಿಸಬೇಕು. ಜತೆಗೆ, ರಾಜ್ಯದ ಸಂಸದರು ಧ್ವನಿಎತ್ತಬೇಕು ಎಂದು ಒತ್ತಾಯಿಸಿದರು.
sirsi