Ankola 71ನೇ ಅಖಿಲ ಭಾರತ ಸಹಕಾರಿ ಸಪ್ತಾಹ

Ankola
Published on

Ankola: ಸಹಕಾರದ ತತ್ವದಲ್ಲಿ ಹುಟ್ಟಿಕೊಂಡ ಸಂಸ್ಥೆಗಳು ಅಧಿಕ ಲಾಭದ ನಿರೀಕ್ಷೆ ಹೊಂದಿರಬಾರದು. ಸಹಕಾರಿ ಸಂಸ್ಥೆಗಳು ಗ್ರಾಮೀಣ ಜನರಿಗೆ, ರೈತರಿಗೆ ಸಹಕಾರ ನೀಡುವ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸಬೇಕು ಎಂದು ಉ.ಕ.ಜಿಲ್ಲಾ ಸಹಕಾರ ಯೂನಿಯನ್ ಕುಮಟಾದ ನಿರ್ದೇಶಕ ಮಂಜೇಶ್ವರ ನಾಯಕ ಹೇಳಿದರು. ತಾಲೂಕಾ ಕೃಷಿ ಹುಟ್ಟುವಳಿ ಸಂಘದ ಆವರಣದಲ್ಲಿ ಸಹಕಾರಿ ಇಲಾಖೆ, ಕೆಡಿಸಿಸಿ ಬ್ಯಾಂಕ್ ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ 71ನೇ ಅಖಿಲ ಭಾರತ ಸಹಕಾರಿ ಸಪ್ತಾಹ 2024 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಸಹಕಾರಿ ಸಂಸ್ಥೆಗಳು ಬ್ಯಾಂಕಿಂಗ್ ವ್ಯವಹಾರದಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿವೆ. ಆದರೆ ಹೆಚ್ಚಿನ ಲಾಭದ ಅಪೇಕ್ಷೆಯಿಂದ ಸಹಕಾರಿ ಕ್ಷೇತ್ರದಲ್ಲಿ ಹಿಂದೇಟು ಹಾಕು ತ್ತಿವೆ. ಕೃಷಿ ಕ್ಷೇತ್ರದ ಚಟುವಟಿಕೆಗಳಿಗೆ ಹೆಚ್ಚು ಉತ್ತೇಜನ ನೀಡುವತ್ತ ಗಮನ ಹರಿಸಬೇಕು ಎಂದರು.

Ankola ಕೆಡಿಸಿಸಿ ಬ್ಯಾಂಕ್ ನಿರ್ದೇಶಕ

ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಬೀರಣ್ಣ ಬಿ. ನಾಯಕ ಮಾತನಾಡಿ, ಸಹಕಾರ ಸಂಸ್ಥೆಗಳು ಗ್ರಾಮೀಣ ಭಾಗ ದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಾಯ ನಿರ್ವಹಿಸುತ್ತಿವೆ. ಸಹಕಾರ ರಂಗದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಕೃಷಿ ಉತ್ತೇಜನಕ್ಕೆ ಯೋಜನೆಗಳನ್ನು ರೂಪಿಸಬೇಕು ಎಂದರು.

ಸಹಕಾರಿ ಧುರೀಣ ವಿನೋದ ನಾಯಕ ಭಾಸಗೋಡ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಪ್ರಕಾಶ ಗುನಗಿ, ಅಂಕೋಲಾ ಸಹಕಾರ ಅಭಿವೃದ್ಧಿ ಅಧಿಕಾರಿ ಮಮತಾ ನಾಯಕ ಮಾತನಾಡಿದರು. ಉ.ಕ.ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ರಾಮದಾಸ ಬೀರಣ್ಣ ನಾಯಕ ಧ್ವಜಾರೋಹಣ ಮಾಡಿದರು.

Ankola ನಿವೃತ್ತ ಸಹಾಯಕ ನಿಬಂಧಕ ಪಿ.ಎನ್.ನಾಯ್ಕ ಸಹಕಾರ ಸಂಘಗಳ ಕುರಿತು ಉಪನ್ಯಾಸ ನೀಡಿದರು. ತಾಲೂಕ ಕೃಷಿ ಹುಟ್ಟುವಳಿ ಮಾರಾಟ ಸಂಘದ ಮಾಜಿ ಅಧ್ಯಕ್ಷ ರಾಜೀವ ಜಿ.ನಾಯಕ ಭಾವಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಸಹಕಾರಿ ಸಂಘದ ಪದಾಧಿಕಾರಿಗಳಾದ ಕೃಷ್ಣ ಹೆಬ್ಬಾರ, ಹೊನ್ನಪ್ಪ ನಾಯಕ, ಸುಬ್ರಾಯ ಹೆಗಡೆ ಹಳವಳ್ಳಿ ಅನಿಸಿಕೆ ವ್ಯಕ್ತಪಡಿಸಿದರು. ಕೃಷಿ ಹುಟ್ಟುವಳಿ ಮಾರಾಟ ಸಂಘದ ಮುಖ್ಯನಿರ್ವಾಹಕ ಅಶೋಕ ಜಿ.ನಾಯಕ ಸ್ವಾಗತಿಸಿದರು. ಉ.ಕ.ಜಿಲ್ಲಾ ಸಹಕಾರ ಯೂನಿಯನ್ ವ್ಯವಸ್ಥಾಪಕ ದರ್ಶನ್ ಬಿ. ಗಾಂವಕರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net