

ಬೆಂಗಳೂರು: ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್(ನಬಾರ್ಡ್) ನಿಂದ ರಾಜ್ಯಕ್ಕೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದ್ದ ಸಾಲದ ಮಿತಿಯನ್ನು ಏಕಾಏಕಿ ಕಡಿತಗೊಳಿಸಿರುವುದು ಸರಿಯಲ್ಲ. ಇದರಿಂದಾಗಿ ರೈತರಿಗೆ ತೊಂದರೆಯಾಗುತ್ತದೆ ಎಂದು ಶಾಸಕ ಜಿ.ಟಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
2023-24ರಲ್ಲಿ ನಬಾರ್ಡ್ನಿಂದ ವಿವಿಧ ಸಹಕಾರಿ ಬ್ಯಾಂಕ್ಗಳಿಗೆ ಸಬ್ಸಿಡಿ ಆಧಾರದಲ್ಲಿ 5,400 ಕೋಟಿ ರೂ. ಸಾಲ ನೀಡಲಾಗಿತ್ತು. ಪ್ರಸಕ್ತ ವರ್ಷದಲ್ಲಿ 2,300 ಕೋಟಿ ರೂ. ಮಾತ್ರ ನೀಡಲಾಗಿದೆ. ಒಟ್ಟಾರೆ ಸಾಲದ ಮಿತಿಯಲ್ಲಿ ಏಕಾಏಕಿ ಶೇ.58 ಕಡಿತಗೊಳಿಸಲಾಗಿದೆ. ಇದರಿಂದಾಗಿ ರೈತರ ಜೀವನಾಡಿಯಾದ ಸಹಕಾರಿ ಬ್ಯಾಂಕ್ಗಳು ಉಳಿಯಬೇಕೆಂದರೆ ನಬಾರ್ಡ್ ಪಾತ್ರ ಪ್ರಮುಖವಾದದ್ದು. ಈ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಬಗೆಹರಿಸಬೇಕು. ಜತೆಗೆ, ರಾಜ್ಯದ ಸಂಸದರು ಧ್ವನಿಎತ್ತಬೇಕು ಎಂದು ಒತ್ತಾಯಿಸಿದರು.
ಹೆಸರು ಇಲ್ಲದ ಕಾರಣಕ್ಕೆ ಹೋಗಲಿಲ್ಲ: ಜೆಡಿಎಸ್ ಬಿಡುಗಡೆ ಮಾಡಿದ್ದ 40 ಹೆಸರು ಒಳಗೊಂಡ ತಾರಾ ಪ್ರಚಾರಕ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದಿದ್ದಕ್ಕೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗಲಿಲ್ಲ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರೂ ಆದ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದರು. ನನ್ನ ಅನುಪಸ್ಥಿತಿಯಲ್ಲಿ ಕೋರ್ಕಮಿಟಿ ಸಭೆ ಮಾಡಿದ್ದರು. ಅಧ್ಯಕ್ಷನಾದ ಮೇಲೆ ರಾಜ್ಯ ಸುತ್ತಲಿಲ್ಲವೇ? ತಾರಾ ಪ್ರಚಾರಕರ ಪಟ್ಟಿ ಹೆಸರಿದ್ದರೆ ಮಾತ್ರ ಪ್ರಚಾರಕ್ಕೆ ಹೋಗಬೇಕಲ್ಲವೇ ಎಂದು ಪ್ರಶ್ನಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಕುರಿತು ಸಿಎಂ ಸಿದ್ದರಾಮಯ್ಯ ಅವರನ್ನು ರಾಜೀನಾಮೆಗೆ ಬಿಜೆಪಿ ಆಗ್ರಹಿಸುತ್ತಿದ್ದರೆ, ಇತ್ತ ಕಾಂಗ್ರೆಸ್ನವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದ್ದರು. ಎಲ್ಲ ರಾಜಕೀಯ ನಾಯಕರ ಮೇಲೆ ಎ್ಐಆರ್ ದಾಖಲಾಗಿದೆ. ಪ್ರತಿನಿತ್ಯ ರಾಜೀನಾಮೆ ನೀಡುವ ವಿಚಾರಗಳನ್ನು ನೋಡಿ ಬೇಸರವಾಗಿತ್ತು. ಹಾಗಾಗಿ, ಮೈಸೂರಿನಲ್ಲಿ ದಸರಾ ಕಾರ್ಯಕ್ರಮದಲ್ಲಿ ಎ್ಐಆರ್ ದಾಖಲಾದರೆ ಎಲ್ಲರೂ ರಾಜೀನಾಮೆ ನೀಡಬೇಕಲ್ಲವೇ? ಎಂಬುದಷ್ಟೇ ನಾನು ಹೇಳಿದ್ದು.
|ಜಿ.ಟಿ.ದೇವೇಗೌಡ. ಶಾಸಕ.