7 ಜನ ಗುಣ, 8 ಮಂದಿಗೆ ಖಚಿತ

21KWR3A
Published on

ಕಾರವಾರ : ಜಿಲ್ಲೆಯಲ್ಲಿ ಹೊರ ಊರುಗಳಿಂದ ಬಂದವರಿಂದ ಕರೊನಾ ಪ್ರಕರಣಗಳು ಮತ್ತೆ ಹೆಚ್ಚಲಾರಂಭಿಸಿದೆ. ಭಾನುವಾರ ಏಳು ಜನರು ಗುಣಹೊಂದಿದ್ದರೆ ಮತ್ತೆ 8 ಜನರಿಗೆ ರೋಗ ಖಚಿತವಾಗಿದೆ.

ನವದೆಹಲಿಯಿಂದ ಶಿರಸಿ ಕಸ್ತೂರಬಾ ನಗರಕ್ಕೆ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇದ್ದ 43 ವರ್ಷದ ಮಹಿಳೆ(ಯುಕೆ- 131), 17 ವರ್ಷದ ಯುವಕ,(ಯುಕೆ-132), ಯಲ್ಲಾಪುರದ ತಟಗಾರ ಕ್ರಾಸ್​ನ 69 ವರ್ಷದ ಮಹಿಳೆ(ಯುಕೆ-133), ಉತ್ತರ ಪ್ರದೇಶದಿಂದ ಆಗಮಿಸಿದ ಭಟ್ಕಳ ಮುಗಳಿಹೊಂಡದ 50 ವರ್ಷದ ವ್ಯಕ್ತಿ(ಯುಕೆ-134), ಮಹಾರಾಷ್ಟ್ರದಿಂದ ಆಗಮಿಸಿದ ಂದೇ ಕುಟುಂಬಕ್ಕೆ ಸೇರಿದ ಬಂದರು ರಸ್ತೆಯ 42 ವರ್ಷದ ಮಹಿಳೆ(ಯುಕೆ-138), 14 ವರ್ಷದ ಬಾಲಕ(ಯುಕೆ-135),19 ವರ್ಷದ ಯುವತಿ(ಯುಕೆ-136), ಹಾಗೂ ಖಾಜಿಯಾ ಗಲ್ಲಿಯ 45 ವರ್ಷದ ಪುರುಷ(ಯುಕೆ-137)ಅವರಿಗೆ ಕರೊನಾ ಇರುವುದು ದೃಢಪಟ್ಟಿದೆ.

ಏಳು ಜನರ ಬಿಡುಗಡೆ: ಕರೊನಾದಿಂದ ಗುಣ ಹೊಂದಿದ 7 ಜನರನ್ನು ಭಾನುವಾರ ನಗರದ ಕ್ರಿಮ್್ಸ ಕೋವಿಡ್-19 ವಾರ್ಡ್​ನಿಂದ ಬಿಡುಗಡೆ ಮಾಡಲಾಯಿತು. ಶಿರಸಿ 62 ವರ್ಷದ ವೃದ್ಧ, 63 ವರ್ಷದ ವೃದ್ಧೆ, ಹಳಿಯಾಳದ 45 ವರ್ಷದ ಪುರುಷ ಹಾಗೂ 12 ವರ್ಷದ ಬಾಲಕ, ಕುಮಟಾದ 34 ವರ್ಷದ ವ್ಯಕ್ತಿ ಹಾಗೂ ಜೊಯಿಡಾದ 24 ವರ್ಷದ ಯುವತಿ ಗುಣ ಹೊಂದಿದ್ದಾರೆ. ಎಲ್ಲರಿಗೂ ಪ್ರಮಾಣಪತ್ರ ಹಾಗೂ ಪುಷ್ಪ ನೀಡಿ ಕ್ರಿಮ್್ಸ ನಿರ್ದೇಶಕ ಗಜಾನನ ನಾಯಕ ಬಿಡುಗಡೆ ಮಾಡಿದರು.

ಕ್ರಿಮ್ಸ್​ನಿಂದ ಬಿಡುಗಡೆಯಾದ ವ್ಯಕ್ತಿಯನ್ನು ಶಿರಸಿಯ ಕಾನಸೂರಿಗೆ ಕರೆದೊಯ್ದು ಹೋಂ ಕ್ವಾರಂಟೈನ್​ಗೆ ಒಳಪಡಿಸಲು ಅಲ್ಲಿನ ಜನ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ. ವಿರೋಧದದ ಹಿನ್ನೆಲೆಯಲ್ಲಿ ಅವರನ್ನು ಶಿರಸಿ ಬನವಾಸಿ ರಸ್ತೆಯ ಗ್ರಾಮವೊಂದಕ್ಕೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪೊಲೀಸರಿಗೆ ಆತಂಕ: ಕಾರವಾರಕ್ಕೆ ಬಂದೋಬಸ್ತ್​ಗಾಗಿ ಬಂದಿದ್ದ ಹಾಸನದ ಪ್ರೊಬೇಶನರಿ ಕಾನ್ಸ್​ಟೇಬಲ್​ಗೆ ಕರೊನಾ ಖಚಿತವಾಗಿದ್ದು, ಅವರ ಸಂಪರ್ಕಕ್ಕೆ ಬಂದ ಕಾರವಾರದ ನಾಲ್ವರು ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ. ಅವರ ಕೋವಿಡ್-19 ಪರೀಕ್ಷಾ ವರದಿ ಇನ್ನೂ ಬರಬೇಕಿದ್ದು, ಇತರ ಪೊಲೀಸ್ ಸಿಬ್ಬಂದಿಯಲ್ಲೂ ಆತಂಕಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net