ಜಲಾಶಯ ಅಭಿವೃದ್ಧಿಗೆ 7 ಕೋಟಿ ರೂ. ಅನುದಾನ

06HDK00005
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;
Published on

ಎಚ್.ಡಿ.ಕೋಟೆ: ತಾರಕ ಮತ್ತು ಕಬಿನಿ ಜಲಾಶಯದ ಅಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಮುಳುಗಡೆಯಾದ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.


ತಾಲೂಕಿನ ತಾರಕ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ಜಲಾಶಯಕ್ಕೆ ಬಾಗಿನ ಅರ್ಪಿಸಿ ಅವರು ಮಾತನಾಡಿ, ಜಲಾಶಯದ ಮೇಲಿನ ಮತ್ತು ಸಂಪರ್ಕ ರಸ್ತೆಗಳ ನಿರ್ಮಾಣ, ಜಲಾಶಯ ವ್ಯಾಪ್ತಿಯಲ್ಲಿ ತಂತಿಬೇಲಿ, ಸಿಬ್ಬಂದಿ ಕೊಠಡಿ, ಶೌಚಗೃಹ ನಿರ್ಮಾಣ, ಜಲಾಶಯದ ಘಟಕಗಳಿಗೆ ಬಣ್ಣ, ಭದ್ರತಾ ವ್ಯವಸ್ಥೆಗೆ ಸಿಸಿ ಕ್ಯಾಮರಾ ಅಳವಡಿಕೆ, ಜಲಾಶಯದ ಮೇಲಿನ ರಸ್ತೆಗೆ ವಿದ್ಯುತ್ ಅಲಂಕಾರ ಸೇರಿದಂತೆ ವಿವಿಧ ಕಾಮಗಾರಿಗೆ 7 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.


ತಾರಕ ಎಡದಂಡೆ ಮತ್ತು ಬಲದಂಡೆ ನಾಲೆಯ ಹೂಳು ತೆಗೆಯಲು, ಗಿಡಗಂಟಿ ತೆರವು ಮಾಡಲು 60 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು ಇನ್ನೂ 25 ಲಕ್ಷ ರೂ. ಅವಶ್ಯಕತೆ ಇದೆ. ಮತ್ತೆ ಅನುದಾನ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕಬಿನಿ ಹಿನ್ನೀರಿನಲ್ಲಿರುವಂತೆ ತಾರಕ ಜಲಾಶಯದಲ್ಲೂ ಬೋಟಿಂಗ್ ವ್ಯವಸ್ಥೆ ಮಾಡಲು ಡಿಪಿಆರ್ ತಯಾರಾಗಿದ್ದು ಅರಣ್ಯ ಇಲಾಖೆಯಿಂದ ಅನುಮತಿಗಾಗಿ ಮನವಿ ಮಾಡಲಾಗಿದೆ ಎಂದರು.


ಕಬಿನಿ ಹಾಗೂ ನುಗು ಜಲಾಶಯಗಳಿಗಿಂತ ತಾರಕ ಜಲಾಶಯದಿಂದ ತಾಲೂಕಿನ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಜಲಾಶಯದಿಂದ 16 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ಕಬಿನಿ ಜಲಾಶಯಕ್ಕೆ 50 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ದಸರಾ ವೇಳೆ ಒಂದು ದಿನ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.


ತಹಸೀಲ್ದಾರ್ ಶ್ರೀನಿವಾಸ್, ಗ್ರೇಡ್ 2 ತಹಸೀಲ್ದಾರ್ ಶ್ರೀಧರ್, ಕಬಿನಿ ಕಾರ್ಯಪಾಲಕ ಇಂಜಿನಿಯರ್ ಚಂದ್ರಶೇಖರ್, ತಾರಕ ಜಲಾಶಯ ಎಇಇ ರಾಮೇಗೌಡ, ಕಬಿನಿ ಎಇಇ ಗಣೇಶ್, ಸರಗೂರು ಎಇಇ ಉಷಾ, ಇಂಜಿನಿಯರ್‌ಗಳಾದ ಮಂಜುನಾಥ್, ನಟಶೇಖರ್, ಗೌಸಿಯಾ ತಾಜ್, ಡಾ.ರವಿಕುಮಾರ್, ಹಿರೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜು, ಉಪಾಧ್ಯಕ್ಷೆ ಇಂದ್ರಮ್ಮ, ಮುಖಂಡರಾದ ಸೋಮೇಶ್, ಸತೀಶ್‌ಗೌಡ, ಅಂತರಸಂತೆ ಬಾಲಯ್ಯ, ಅಶೋಕ್, ಬಿ.ಸಿ.ಬಸಪ್ಪ, ಸರಗೂರು ಕಸಾಪ ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಶಂಭುಲಿಂಗನಾಯಕ, ರಾಜು, ಜಿನ್ನಹಳ್ಳಿ ರಾಜನಾಯಕ, ಕ್ಯಾತನಹಳ್ಳಿ ನಾಗರಾಜು, ಪುಟ್ಟರಾಜು, ರೈತ ಮುಖಂಡರಾದ ಪಳಸ್ವಾಮಿ, ನವೀನ್‌ಗೌಡ, ಮಾದರಾಜು, ಪುಟ್ಟೇಗೌಡ, ಹೊ.ಕೆ.ಮಹೇಂದ್ರ, ನಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net