7 ಕಾರು ವಶ, 20 ಮಂದಿ ವಿಚಾರಣೆ

FotoJet (3)
Published on

ಸಂಚಾರ ಠಾಣೆ ಪೊಲೀಸರ ಕಾರ್ಯಾಚರಣೆ ನಿಯಮ ಉಲ್ಲಂಸಿದ್ದಕ್ಕೆ ಪ್ರಕರಣ ದಾಖಲು

ಚಿಕ್ಕಬಳ್ಳಾಪುರ: ತಾಲೂಕಿನ ಪ್ರವಾಸಿ ತಾಣಗಳಿಗೆ ಭೇಟಿಯ ವೇಳೆ ಸಂಚಾರ ನಿಯಮಗಳನ್ನು ಉಲ್ಲಂಸಿ, ಚಾಲನೆ ಮಾಡುತ್ತಿದ್ದ ವಾಹನಗಳನ್ನು ಪೊಲೀಸರು ಭಾನುವಾರ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಅತಿವೇಗದ ಸಂಚಾರ, ಪರವಾನಗಿ ಇಲ್ಲದೇ ವಾಹನಗಳ ಪರಿವರ್ತನೆ, ಕರ್ಕಶ ಶಬ್ದ ಹೊರಸೂಸುವ ವ್ಯವಸ್ಥೆ ಮಾಡಿಕೊಂಡಿದ್ದ ವಿವಿಧ 7 ಕಾರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 20ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಲಾಗಿದೆ.

ನಂದಿ ಬೆಟ್ಟ, ಈಶ ಆದಿಯೋಗಿ ಧ್ಯಾನ ಕೇಂದ್ರ, ಆವಲಬೆಟ್ಟ, ರಂಗಸ್ಥಳ ಸೇರಿ ವಿವಿಧ ಪ್ರವಾಸಿ ತಾಣಗಳಿಗೆ ತೆರಳುವ ಸಂದರ್ಭದಲ್ಲಿ ಕೆಲ ಪುಂಡರು ಜಾಲಿ ರೈಡ್ ಹೆಸರಿನಲ್ಲಿ ಅತಿವೇಗವಾಗಿ ವಾಹನವನ್ನು ಚಲಾಯಿಸುತ್ತಿರುವ ಬಗ್ಗೆ ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ಸಂಚಾರ ಠಾಣೆಯ ಪೊಲೀಸರು ಬೆಂಗಳೂರು ಮತ್ತು ಹೈದರಬಾದ್ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯಾಚರಣೆ ನಡೆಸಿ ಸೈಲೆನ್ಸರ್‌ಗಳನ್ನು ತೆಗೆದಿರುವುದು, ಪೈಪೋಟಿಯ ಸ್ಪರ್ಧೆಗೆ ಅನುಗುಣವಾಗಿ ಬಿಡಿಭಾಗಗಳ ಬದಲಾವಣೆ ಸೇರಿ ವಿವಿಧನಿಯಮ ಉಲ್ಲಂಘನೆ ಕಂಡು ಬಂದಿದ್ದರಿಂದ ಪ್ರಕರಣ ದಾಖಲಿಸಿದ್ದಾರೆ.

"ಚಿಕ್ಕಬಳ್ಳಾಪುರ ಭಾಗದಲ್ಲಿ ಜಾಲಿರೈಡ್ ಹೆಸರಿನಲ್ಲಿ ಅತಿವೇಗವಾಗಿ ಚಾಲನೆ ಮಾಡುತ್ತಿದ್ದ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಸವಾರರಿಗೆ ನಿಯಮ ಉಲ್ಲಂಸದಂತೆ ಎಚ್ಚರಿಕೆ ನೀಡಲಾಗಿದೆ." - ಕುಶಾಲ್ ಚೌಕ್ಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net