ಶಿವಕುಮಾರಸ್ವಾಮಿಗಳ ಪುಣ್ಯಾರಾಧನೆ

svl swami
Published on

ಸಾಸ್ವೆಹಳ್ಳಿ: ಹೋಬಳಿಯ ಹನಗವಾಡಿ ಗ್ರಾಮದಲ್ಲಿ ಬುಧವಾರ ಸಿದ್ಧಗಂಗಾ ಶ್ರೀ ಶಿವಕುಮಾರಸ್ವಾಮಿಗಳ 6 ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅನ್ನ ದಾಸೋಹ ಹಾಗೂ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಮಕ್ಕಳು, ಮಹಿಳೆಯರು ಪಾಲ್ಗೊಂಡು ಶ್ರೀಗಳ ಭಾವಚಿತ್ರಕ್ಕೆ ಹೂವಿನ ಅಲಂಕಾರ, ವಿಶೇಷ ಪೂಜೆ ಸಲ್ಲಿಸಿದರು.

ಗ್ರಾಮಸ್ಥರಾದ ಗುರುಶಾಂತಪ್ಪ, ರಫೀಕ್, ವಿಜಯ್, ಸುರೇಶ್, ಹರೀಶ್, ರಾಜು, ನಂದೀಶ್, ಪ್ರವೀಣ್, ಭೀಮಪ್ಪ, ಮಲ್ಲೇಶ್, ನಾಗರಾಜ್, ಮಂಜುನಾಥ್ ಸೇರಿ ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net