

ತಿ.ನರಸೀಪುರ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶನಿವಾರ 68,59,031ರೂ.ಉಳಿತಾಯ ಬಜೆಟನ್ನು ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಪ್ರಕಾಶ್ ಮಂಡಿಸಿದರು.
ಅಭಿವೃದ್ಧಿ ಮತ್ತು ಮೂಲಸೌಕರ್ಯಕ್ಕೆ ಆದ್ಯತೆ ನೀಡಿ ಮಂಡನೆಯಾದ 68.59 ಲಕ್ಷ ರೂ.ಗಳ ಉಳಿತಾಯ ಬಜೆಟ್‌ಗೆ ಸರ್ವ ಸದಸ್ಯರು ಅನುಮೋದನೆ ನೀಡಿದರು. ಅಧ್ಯಕ್ಷೆ ಬಿ.ವಸಂತಾ ಶ್ರೀಕಂಠ ಅಧ್ಯಕ್ಷತೆಯಲ್ಲಿ ನಡೆದ ಆಯವ್ಯಯ ಮಂಡನೆ ಸಭೆಯಲ್ಲಿ 2025-26ನೇ ಸಾಲಿನ ನಿರೀಕ್ಷಿತ ಆದಾಯ 23,86,34,031 ರೂ.ಗಳಲ್ಲಿ ನಿರೀಕ್ಷಿತ ಪಾವತಿ 23,17,75,000 ರೂ.ಗಳನ್ನು ಕಳೆದು 68,59,031 ರೂ.ಉಳಿತಾಯ ಬಜೆಟ್ ಮಂಡಿಸಲಾಯಿತು.
ನಿರೀಕ್ಷಿತ ಆದಾಯದಲ್ಲಿ ಪ್ರಾರಂಭಿಕ ಶಿಲ್ಕು 3,76,94,031 ರೂ., ನೀರು ಸರಬರಾಜು ಮತ್ತು ಒಳಚರಂಡಿ ಸಂಪರ್ಕ ಶುಲ್ಕ 68 ಲಕ್ಷ ರೂ., ಆಸ್ತಿ ತೆರಿಗೆ 3.20 ಕೋಟಿ ರೂ., ವಾಣಿಜ್ಯ ಮಳಿಗೆ ಬಾಡಿಗೆ 45 ಲಕ್ಷ ರೂ., ಅಭಿವೃದ್ಧಿ ಶುಲ್ಕ ಸೇರಿದಂತೆ ಇತರೆ ಪರವಾನಗಿ ಶುಲ್ಕ, ಖಾತೆಗಳ ಶುಲ್ಕ ಮಾರುಕಟ್ಟೆ, ಶುಲ್ಕ ಹಾಗೂ ಜುಲ್ಮಾನೆಗಳು ಮತ್ತು ಇತರ ಆದಾಯದಿಂದ 1,09,60,000 ರೂ., ಘನ ತ್ಯಾಜ್ಯ ನಿರ್ವಹಣಾ ಶುಲ್ಕ 21.50 ಲಕ್ಷ ರೂ., ಖಾಸಗಿ ಬಸ್ ನಿಲ್ದಾಣ ಹಾಗೂ ಮಾರುಕಟ್ಟೆ ಶುಲ್ಕ 13 ಲಕ್ಷ ರೂ., ವೇತನ ಅನುದಾನ 2.89 ಕೋಟಿ ರೂ., ವಿದ್ಯುತ್ ಅನುದಾನ 2.13 ಕೋಟಿ ರೂ., ಮುಕ್ತ ನಿಧಿ ಅನುದಾನ 29 ಲಕ ್ಷ ರೂ., 15ನೇ ಹಣಕಾಸು ಅನುದಾನ 1.88 ಕೋಟಿ ರೂ., ಸ್ವಚ್ಛ ಭಾರತ್ ಮಿಷನ್ ಅನುದಾನ 1.50 ಕೋಟಿ ರೂ.ಹಾಗೂ ಇತರ ಅನುದಾನ/ಆದಾಯ 5 ಕೋಟಿ ರೂ.ನಿರೀಕ್ಷಿಸಲಾಗಿದೆ ಎಂದರು.
ನಿರೀಕ್ಷಿತ ಪಾವತಿಗಳಲ್ಲಿ ಪುರಸಭೆ ವ್ಯಾಪ್ತಿಯ ಮುಖ್ಯ ರಸ್ತೆಗಳಿಗೆ ಸ್ವಾಗತ ಕಮಾನು ನಿರ್ಮಾಣ ಮತ್ತು ವಾರ್ಡ್‌ಗಳಿಗೆ ಸೂಚಿ ಫಲಕಗಳ ನಿರ್ಮಾಣಕ್ಕಾಗಿ 81 ಲಕ್ಷ ರೂ., ರಸ್ತೆ ಮತ್ತು ರಸ್ತೆ ಬದಿಯ ಚರಂಡಿಗಳು ಮಳೆ ನೀರಿನ ಚರಂಡಿಗಳ ಹಾಗೂ ಉದ್ಯಾನಗಳ ಅಭಿವೃದ್ಧಿ 6,19,70,000 ರೂ., ಸ್ವಚ್ಛ ಭಾರತ್ ಮಿಷನ್ ಅನುದಾನದ ವೆಚ್ಚ 1.50 ಕೋಟಿ ರೂ., ಸಾರ್ವಜನಿಕ ಸಮುದಾಯ ಮತ್ತು ಅಂಗನವಾಡಿ ಶಾಲೆಗಳ ಶೌಚಗೃಹಗಳ ದುರಸ್ತಿಗಾಗಿ 15 ಲಕ್ಷ ರೂ., ಪ್ರಾಣಿಗಳ ಜನನ ನಿಯಂತ್ರಣಕ್ಕಾಗಿ ಶಸ್ತ್ರ ಚಿಕಿತ್ಸಾ ಕೇಂದ್ರ ನಿರ್ಮಾಣಕ್ಕೆ 25 ಲಕ್ಷ ರೂ., ಸರ್ವ ಜನಾಂಗದ ಸ್ಮಶಾನಗಳ ಅಭಿವೃದ್ಧಿಗೆ 50 ಲಕ ್ಷರೂ., ಕೌನ್ಸಲೆನ್ಸಿ ಫೀ ಕಾನೂನು ವೆಚ್ಚ ಹಾಗೂ ಲೆಕ್ಕಪರಿಶೋಧಕರ ಶುಲ್ಕ 20 ಲಕ್ಷ ರೂ., ಕಚೇರಿ ಉಪಕರಣಗಳು, ಗಣಕಯಂತ್ರಗಳು ಪ್ರಿಂಟರ್ ಜೆರಾಕ್ಸ್ ಮಷೀನ್ ಯಂತ್ರೋಪಕರಣಗಳ ಖರೀದಿ ಮತ್ತು ನಿರ್ವಹಣೆಗೆ 15 ಲಕ್ಷ ರೂ., ರಾಷ್ಟ್ರೀಯ ಹಬ್ಬಗಳ ಆಚರಣೆಗಳು ಮತ್ತು ಇತರೆ ಕಾರ್ಯಕ್ರಮಗಳಿಗಾಗಿ 28 ಲಕ್ಷ ರೂ., ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಧಿಗೆ 27 ಲಕ್ಷ ರೂ., ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಧಿಗೆ ಎಸ್‌ಎಫ್‌ಸಿ ಮತ್ತು ಪುರಸಭಾ ನಿಧಿ 4.60 ಲಕ್ಷ ರೂ., ಅಂಗವಿಕಲರ ಅಭಿವೃದ್ಧಿ ನಿಧಿಗೆ 2.45 ಲಕ ್ಷರೂ., ಪುರಸಭಾ ಕಾಯಂ ನೌಕರರ ವೇತನಕ್ಕಾಗಿ 3 ಕೋಟಿ ರೂ., ವಿದ್ಯುತ್ ಶುಲ್ಕ ಪಾವತಿಗಾಗಿ (ನೀರು ಸರಬರಾಜು ಹಾಗೂ ಬೀದಿ ದೀಪ) 2.13 ಕೋಟಿ ರೂ.
ನೀರು ಸರಬರಾಜು ಯಂತ್ರಗಳ ಖರೀದಿ, ರಿಪೇರಿ, ಕೊಳವೆ ಬಾವಿ ಸಾಮಗ್ರಿಗಳು ಮತ್ತು ನೀರು ಶುದ್ಧೀಕರಣ ಘಟಕ ಹಾಗೂ ಮೋಟಾರ್ ಪಂಪ್ ಟ್ರ್ಯಾಕ್ಟರ್ ಹ್ಯಾಂಡ್ ಪಂಪ್ ಖರೀದಿಸಲು, ರಿಪೇರಿ ಮತ್ತು ನಿರ್ವಹಣೆ 1.60 ಕೋಟಿ ರೂ., ನೈರ್ಮ್ಯಲೀಕರಣ ರಾಸಾಯನಿಕಗಳು ಹಾಗೂ ಸ್ವಚ್ಛತಾ ಸಾಧನ ಸಲಕರಣೆಗಳು ಬಿಡಿ ಭಾಗಗಳ ಖರೀದಿ ಮತ್ತು ಕಾರ್ಯಚರಣೆ ವೆಚ್ಚಗಳು 30 ಲಕ್ಷ ರೂ., ಮಲಿನ ನೀರು ಶುದ್ಧೀಕರಣ ಘಟಕದ ಭೂ ಸ್ವಾಧೀನ ಪಾವತಿ ವೆಚ್ಚ 1.15 ಕೋಟಿ ರೂ., ಘನತ್ಯಾಜ್ಯ ವಿಲೇವಾರಿ ವಾಹನಗಳ ಇಂಧನ ರಿಪೇರಿ, ವಿಮೆ ಹಾಗೂ ನಿರ್ವಹಣಾ ವೆಚ್ಚ 65 ಲಕ್ಷ ರೂ., ಹೊರಗುತ್ತಿಗೆ ನೌಕರರ ವೇತನ 75 ಲಕ್ಷ ರೂ., ಬೀದಿ ದೀಪಗಳ ಅಳವಡಿಕೆ ಹಾಗೂ ವಾರ್ಷಿಕ ನಿರ್ವಹಣೆಗೆ 30 ಲಕ್ಷ ರೂ., ಕೌನ್ಸಿಲ್ ಸಂಬಂಧಿ ವೆಚ್ಚಗಳು (ಗೌರವಧನ ಅಧ್ಯಯನ ಪ್ರವಾಸ ಸಭಾ ವೆಚ್ಚ) 22 ಲಕ್ಷ ರೂ., ವಿವಿಧ ಇಲಾಖೆಗಳಿಗೆ ಪಾವತಿಸಬೇಕಾದ ಶಾಸನ ಬದ್ಧ ತೆರಿಗೆ ಮತ್ತು ಕರಗಳ ಪಾವತಿ 1,35,50,000 ರೂ.ಹಾಗೂ ಸಾಮಾನ್ಯ ಆಡಳಿತ ವೆಚ್ಚಗಳು/ಇತರ ವೆಚ್ಚಗಳು 21.50 ಲಕ್ಷ ರೂ.ಪಾವತಿ ಮಾಡಬೇಕಿದೆ ಎಂದು ಸಿ.ಪ್ರಕಾಶ್ ವಿವರಿಸಿದರು.
ಉಪಾಧ್ಯಕ್ಷೆ ಎಂ.ರಾಜೇಶ್ವರಿ ರಾಘವೇಂದ್ರ, ಸದಸ್ಯರಾದ ರೂಪಾ, ಎಂ.ಸಿದ್ದು, ಪ್ರೇಮಾ, ಎಲ್.ಮಂಜುನಾಥ್, ಬಿ.ಬೀಬಿ, ಜಿ.ರೂಪಶ್ರೀ, ಆರ್.ನಾಗರಾಜು, ಮಹದೇವಮ್ಮ, ಟಿ.ಎಂ.ನಂಜುಂಡಸ್ವಾಮಿ, ಎನ್.ಸೋಮಣ್ಣ, ಆರ್.ಅರ್ಜುನ್, ಮಾದೇವಿ, ಎಸ್.ಮದನ್ ರಾಜ್, ಪಿ.ಶೋಭಾರಾಣಿ, ಆರ್.ತೇಜಸ್ವಿನಿ, ನಾಗರತ್ನಾ, ಮಂಜು ಬಾದಾಮಿ, ಕೆ.ಕಿರಣ್, ಕಚೇರಿ ವ್ಯವಸ್ಥಾಪಕ ಎಂ.ಮಹೇಂದ್ರ, ಕಿರಿಯ ಇಂಜಿನಿಯರ್ ಸಿದ್ದಪ್ಪ, ಲೆಕ್ಕಾಧಿಕಾರಿ ಎಂ.ಕೆ.ವಿನಯಕುಮಾರ್, ಕಂದಯಾಧಿಕಾರಿ ಕೆ.ಸಿ.ಕುಮಾರಿ ತ್ರಿವೇಣಿ, ಪ್ರಥಮ ದರ್ಜೆ ಸಹಾಯಕಿ ಸಿ.ಕುಮಾರಿ ಪ್ರಿಯಾಂಕಾ, ಎಚ್.ಸಿ.ಹರೀಶ್ ಕುಮಾರ್, ಸಿಬ್ಬಂದಿ ಇದ್ದರು.