64.9 ಲಕ್ಷ ರೂ. ಹಣ ಸಂಗ್ರಹ

19-KGL-4
Published on

ಕೊಳ್ಳೇಗಾಲ: ತಾಲೂಕಿನ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು 6 ತಿಂಗಳ ಅವಧಿಗೆ 64.9 ಲಕ್ಷ ರೂ. ಹಣ ಸಂಗ್ರಹವಾಗಿದೆ.

ತಹಸೀಲ್ದಾರ್ ಬಸವರಾಜು ಹಾಗೂ ರಾಜುಬೊಪ್ಪೇಗೌಡನ ಪುರದ ಶ್ರೀ ಜ್ಞಾನಾನಂದ ಚೆನ್ನರಾಜೇ ಅರಸ್ ನೇತೃತ್ವದಲ್ಲಿ ಶನಿವಾರ ಹಳೇ ಮಠದ 2 ಹುಂಡಿಗಳು ಹಾಗೂ ಸಿದ್ದಪ್ಪಾಜಿ ದೇವಸ್ಥಾನದ 6 ಹುಂಡಿಗಳ ಎಣಿಕೆ ಕಾರ್ಯ ನಡೆದಿದೆ. ಗ್ರಾಮಾಂತರ ಠಾಣೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಹುಡಿ ಎಣಿಕೆ ಕಾರ್ಯದಲ್ಲಿ ಉಪ ತಹಸೀಲ್ದಾರ್ ವಿಜಯಕುಮಾರ್, ರೆವಿನ್ಯೂ ಇನ್‌ಸ್ಪೆಕ್ಟರ್ ರಂಗಸ್ವಾಮಿ, ಕಂದಾಯ ಇಲಾಖೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net