ಜುಗಾರಿ ನಿರತ 6 ಮಂದಿ ಬಂಧನ

gambling
Published on

ಗುರುಪುರ: ಕುಪ್ಪೆಪದವಿನ ಆಚಾರಿಜೋರ ದೊಡ್ಡಳಿಕೆ ಎಂಬಲ್ಲಿ ಜುಗಾರಿ ಆಡುತ್ತಿದ್ದ 6 ಮಂದಿಯನ್ನು ಬಂಧಿಸಿದ ಬಜ್ಪೆ ಪೊಲೀಸರು ಆರೋಪಿಗಳಿಂದ ಆಟಕ್ಕೆ ಬಳಸುತ್ತಿದ್ದ 3,700 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಇಮ್ತಿಯಾಜ್, ಅನ್ವರ್ ಸಾದಿಕ್, ಆದಂ, ಮೊಹಮ್ಮದ್ ಅಶ್ರಫ್, ಮೊಹಮ್ಮದ್ ಜುಬೈರ್ ಮತ್ತು ಮೊಹಮ್ಮದ್ ಸಮ್ರಾಜ್ ಬಂಧಿತ ಆರೋಪಿಗಳಾಗಿದ್ದು, ಇವರೆಲ್ಲ ಕುಪ್ಪೆಪದವಿನ ನಿವಾಸಿಗಳು. ಇವರು ಬುಧವಾರ ಆಚಾರಿಜೋರ ಎಂಬಲ್ಲಿ ನದಿ ಬದಿಯಲ್ಲಿ ರಾತ್ರಿ ವೇಳೆ ಮೇಣದ ಬತ್ತಿ ಬೆಳಕಲ್ಲಿ ಜುಗಾರಿ ಆಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ, ಆರೋಪಿಗಳ ಸಹಿತ ನಗದು, ಮೇಣದ ಬತ್ತಿ, ಟರ್ಪಾಲ್ ಮತ್ತು 2 ಪ್ಯಾಕೆಟ್ ಇಸ್ಪೀಟ್ ಎಲೆ ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net