

ಬೆಂಗಳೂರು: ಹೆಚ್ಚು ಓದಲಿಲ್ಲ, ಕಡಿಮೆ ವಿದ್ಯಾರ್ಹತೆ ಎಂದುಕೊಂಡವರಿಗೆ ಇಲ್ಲೊಂದು ಉತ್ತಮ ಅವಕಾಶವಿದೆ. ಎಸ್ಎಸ್ಎಲ್ಸಿ ಆಗಿದ್ದರೂ ಸಾಕು, ಆರೇ ತಿಂಗಳಲ್ಲಿ ಆಯುರ್ವೇದ ಅಸಿಸ್ಟೆಂಟ್ ಎನಿಸಿಕೊಳ್ಳುವಂಥ ವಿಶೇಷ ಕೋರ್ಸ್ಗಳು ಇಲ್ಲಿವೆ. ಕೇಂದ್ರ ಸರ್ಕಾರದ ಮಾನ್ಯತೆ ಇರುವ ಇಂಥದ್ದೊಂದು ಕೋರ್ಸ್ ರಾಜಧಾನಿ ಬೆಂಗಳೂರಿನಲ್ಲಿ ಲಭ್ಯವಿದೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎಂಎಚ್ಆರ್ಡಿ) ಮಾನ್ಯತೆ ಪಡೆದಿರುವ ಈ ಕೋರ್ಸ್ಗಳು ಕೇವಲ ಆರು ತಿಂಗಳ ಅವಧಿಯವು. ಬೆಂಗಳೂರಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಸಂಸ್ಥೆ ಈ ಕೋರ್ಸ್ಗಳನ್ನು ನೀಡಲಿದ್ದು, ಜ. 1ರಿಂದ ಪ್ರಾರಂಭವಾಗಲಿದೆ.
ಆಯುರ್ವೇದ ಅಸಿಸ್ಟೆಂಟ್, ಪಂಚಕರ್ಮ ಅಸಿಸ್ಟೆಂಟ್, ಯೋಗ ಅಸಿಸ್ಟೆಂಟ್ ಕೋರ್ಸ್ಗಳು ಇದರಲ್ಲಿ ಲಭ್ಯ ಇವೆ. ಹೆಚ್ಚಿನ ಮಾಹಿತಿಗಾಗಿ 9739566112 ಸಂಪರ್ಕಿಸಬಹುದು ಅಥವಾ sdmcabh@gmail.com ಗೆ ಇ-ಮೇಲ್ ಮಾಡಬಹುದು.