ಮಧ್ಯರಾತ್ರಿಯಲ್ಲಿ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದ; ಮಾಡಬಾರದ್ದು ಮಾಡಲು ಹೋಗಿ ಏನಾಯಿತು ನೋಡಿ..

Collage
Published on

ರಾಯಚೂರು: ಈತ ಮಾಡಬಾರದ್ದು ಮಾಡಲು ಹೋಗಿ ಮಧ್ಯರಾತ್ರಿಯಲ್ಲಿ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ. ಈತನೊಂದಿಗೆ ಇನ್ನಿಬ್ಬರು ಕೈಜೋಡಿಸಿದ್ದು, ಅವರು ಸ್ಥಳೀಯರು ಜಮಾಯಿಸುವಂತೆ ಕಾಲ್ಕಿತ್ತು ತಪ್ಪಿಸಿಕೊಂಡಿದ್ದಾರೆ. ಬಳಿಕ ಈತನನ್ನು ಪೊಲೀಸರೂ ವಿಚಾರಿಸಿಕೊಂಡಿದ್ದು ಬೆಳಗಾಗುವಷ್ಟರಲ್ಲಿ ಹಣ್ಣುಗಾಯಿ-ನೀರುಗಾಯಿ ಆಗಿಬಿಟ್ಟಿದ್ದಾನೆ.

ರಾಯಚೂರು ಜಿಲ್ಲೆಯ ಕವಿತಾಳ ಸಮೀಪದ ಅಮೀನಗಡದಲ್ಲಿ ಶುಕ್ರವಾರ ತಡರಾತ್ರಿ ಇಂಥದ್ದೊಂದು ಘಟನೆ ನಡೆದಿದೆ. ಇಬ್ಬರು ಸಹಚರರೊಂದಿಗೆ ಕಳ್ಳತನ ಮಾಡಲು ಮುಂದಾದಾಗ ಈತ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಪರಾತ್ರಿಯಲ್ಲಿ ಸಿಕ್ಕ ಈತನನ್ನು ಸ್ಥಳೀಯರು ಮರಕ್ಕೆ ಕಟ್ಟಿ ಹಾಕಿ ಸರಿಯಾಗಿ ಥಳಿಸಿದ್ದಾರೆ.

ಒಬ್ಬ ಸಿಕ್ಕಿಬೀಳುತ್ತಿದ್ದಂತೆ ಹುಷಾರಾದ ಮತ್ತಿಬ್ಬರು ತಕ್ಷಣ ಅಲ್ಲಿಂದ ಓಡಿಹೋಗಿ ಪರಾರಿಯಾಗಿದ್ದಾರೆ. ಸ್ಥಳೀಯರು ಬೆನ್ನಟ್ಟಿ ಹಿಡಿಯುವ ಮುಂಚೆ ಕತ್ತಲಲ್ಲಿ ಕಣ್ಮರೆಯಾಗಿ ತಪ್ಪಿಸಿಕೊಂಡಿದ್ದಾರೆ. ಸಿಕ್ಕ ಒಬ್ಬನನ್ನು ಸ್ಥಳೀಯರು ಕವಿತಾಳ ಠಾಣಾ ಪೊಲೀಸರಿಗೆ ಒಪ್ಪಿಸಿದ್ದು, ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಮೂವರು ಅಳಂದ ಮೂಲದ ಕಳ್ಳರು ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net