ಶೇ.6.5 ಡಿವಿಡೆಂಡ್ ಘೋಷಣೆ

Sul_Society
Published on

ವಿಜಯವಾಣಿ ಸುದ್ದಿಜಾಲ ಸುಳ್ಯ

ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಮಂಗಳವಾರ ನಡೆಯಿತು. ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತು ಅಧ್ಯಕ್ಷತೆ ವಹಿಸಿ ಸಂಘ 42,11,23,000 ರೂ. ವ್ಯವಹಾರ ನಡೆಸಿದ್ದು 42.22 ಲಕ್ಷ ಸಾವಿರ ಲಾಭ ಗಳಿಸಿದೆ. ವರದಿ ಸಾಲಿನಲ್ಲಿ ಸದಸ್ಯರಿಗೆ ಶೇ.6.5 ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಮಾಹಿತಿ ನೀಡಿದರು. ಸಹಕಾರ ಸಂಘದ ಮಲ್ಟಿ ಸರ್ವಿಸ್ ಸೆಂಟರನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ ಉದ್ಘಾಟಿಸಿದರು. ಸಂಘದ ಉಪಾಧ್ಯಕ್ಷೆ ಜಲಜಾ ದೇವರಗುಂಡ, ನಿರ್ದೇಶಕರಾದ ಸುನೀಲ್ ಪಾತಿಕಲ್ಲು, ಭಾಸ್ಕರ ಮಿತ್ತಪೇರಾಲು, ಭಾರತಿ ಉಗ್ರಾಣಿಮನೆ, ಮೋನಪ್ಪ ನಾಯ್ಕ ಬೆಂಗತ್ತಮಲೆ, ರವಿ ಚೇರದಮೂಲೆ, ಆಂತರಿಕ ಲೆಕ್ಕ ಪರಿಶೋಧಕರಾದ ಅನಂತ ಕೃಷ್ಣ ಚಾಕೊಟೆ ಇದ್ದರು.

ಸಹಕಾರ ಸಂಘದ ಸದಸ್ಯರ ಮಕ್ಕಳು 2023- 24ನೇ ಸಾಲಿನ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ 12 ವಿದ್ಯಾರ್ಥಿಗಳನ್ನು ನಗದು ನೀಡಿ ಪುರಸ್ಕರಿಸಲಾಯಿತು. ಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾಗಿ ಆಯ್ಕೆಯಾದ ಎಸ್.ಎನ್. ಮನ್ಮಥ ಅವರನ್ನು ಹಾಗೂ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಬಾಲಕೃಷ್ಣ ಪುತ್ಯ ಅವರನ್ನು ಸನ್ಮಾನಿಸಲಾಯಿತು.

ನಿರ್ದೇಶಕ ಪದ್ಮನಾಭ ಚೌಟಾಜೆ ಸ್ವಾಗತಿಸಿ, ನಿರ್ದೇಶಕ ಸುರೇಶ್ ಕಣೆಮರಡ್ಕ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕ ಚಂದ್ರಜಿತ್ ಮಾವಂಜಿ ವಂದಿಸಿದರು. ಸಿಬ್ಬಂದಿ ಶ್ರೀಕಾಂತ್ ಮಾವಂಜಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net