

ಬೆಂಗಳೂರು: ಕೆಎಸ್ಆರ್ಟಿಸಿ ತನಿಖಾ ತಂಡ ತಪಾಸಣಾ ಕಾರ್ಯ ಚುರುಕುಗೊಳಿಸಿದ್ದು, ಆಗಸ್ಟ್ನಲ್ಲಿ ಟಿಕೆಟ್ರಹಿತ ಪ್ರಯಾಣಿಕರಿಂದ 6,21,383 ರೂ. ದಂಡ ಸಂಗ್ರಹಿಸಿದೆ.
43,781 ಬಸ್ಗಳನ್ನು ತನಿಖೆಗೊಳಪಡಿಸಿ, 3,692 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ನಿಗಮದ ಆದಾಯದಲ್ಲಿ ಸೋರಿಕೆಯಾಗುತ್ತಿದ್ದ 80,059 ರೂ.ಗಳನ್ನು ತನಿಖಾಧಿರಿಗಳು ಪತ್ತೆ ಹಚ್ಚಿದ್ದಾರೆ.
ತಪ್ಪಿತಸ್ಥರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗಿದೆ ಎಂದು ನಿಗಮ ತಿಳಿಸಿದೆ.