

ಮದ್ದೂರು: ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಗೊಂಡ ಭೂ ಬ್ಯಾಂಕ್‌ನ ವೈಭವದ ದಿನಗಳನ್ನು ಮರಳಿ ತರುವಲ್ಲಿ ಷೇರುದಾರರ ಸಹಕಾರ ಅಗತ್ಯ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆಂಪೇಗೌಡ ತಿಳಿಸಿದರು.
ಮದ್ದೂರಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನಲ್ಲಿ ಬುಧವಾರ ಆಯೋಜಿಸಿದ್ದ 2022-2023ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು. ಸದಸ್ಯರು ನಿಶ್ಚಿತ ಠೇವಣಿ ಇಡುವ ಮೂಲಕ ಬ್ಯಾಂಕ್ ಹಾಗೂ ಷೇರುದಾರರ ವಹಿವಾಟಿನ ವೃದ್ಧಿಗೆ ಮುಂದಾಗಬೇಕೆಂದು ಎಂದು ಹೇಳಿದರು.
ನೂತನ ಸಾಲಿಗೆ 294 ಸದಸ್ಯರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಒಟ್ಟಾರೆ ಷೇರು ಬಂಡವಾಳ 136.29 ಲಕ್ಷ ರೂ.ಇದೆ. ಈ ಸಾಲಿನ ಅಂತ್ಯಕ್ಕೆ 7.5 ಕೊಟಿ ರೂ.ಸಾಲ ವಸೂಲು ಬಾಕಿ ಇದ್ದು, 57.5 ಲಕ್ಷ ರೂ.ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಿ ಕಾರ್ಡ್ ಮಾಜಿ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ರಾಜ್ಯ ಸರ್ಕಾರ ಬರ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸಾಲ ವಸೂಲಿ ನಿಲ್ಲಿಸಬೇಕು. ಇದರೊಂದಿಗೆ ಬಡ್ಡಿ ಹಾಕಬಾರದು ಎಂದು ಒತ್ತಾಯಿಸಿದರು.
ಬ್ಯಾಂಕ್‌ನ ಉಪಾಧ್ಯಕ್ಷೆ ಸವಿತಾ, ಮಾಜಿ ಆಧ್ಯಕ್ಷರಾದ ನ.ಲಿ.ಕೃಷ್ಣ, ಮುತ್ತುರಾಜ್, ಸಿದ್ದಮರಿ, ಉಪಾಧ್ಯಕ್ಷರಾದ ಸಿದ್ದರಾಮು, ಈರೇಗೌಡ, ನಿರ್ದೇಶಕರಾದ ಮಧು, ದಾಸ ನಾಯಕ, ಸಿದ್ದೇಗೌಡ, ತರಿಕೆರೆ ರಾಜು, ಗೌರಮ್ಮ, ಕೃಷ್ಣಪ್ಪ, ಪ್ರಭಾರ ವ್ಯವಸ್ಥಾಪಕಿ ಭಾಗ್ಯಾ ಹಾಜರಿದ್ದರು.